
ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳು ತುಂಬಿದ್ದು, ಬಹಳಷ್ಟು ಜನರು ಕನ್ನಡದ ‘ಪುಷ್ಪಾವತಿ’ ಹಾಡಿಗೆ ತಮ್ಮದೇ ಆದ ರೀತಿಯಲ್ಲಿ ನೃತ್ಯ ಮಾಡಲು ಪ್ರಯತ್ನಿಸಿದ್ದಾರೆ.
ತಾಂಜಾನಿಯಾ ಮೂಲದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್ ಮತ್ತು ಅವರ ಸಹೋದರಿ ನೀಮಾ ಅವರೂ ಕೂಡಾ ಇದನ್ನು ಟ್ರೈ ಮಾಡಿದ್ದಾರೆ. ಅವರು ಕೂಡ ‘ಪುಷ್ಪಾವತಿ’ ಗೆ ನೃತ್ಯದ ಚಲನೆಯನ್ನು ಸಿಂಕ್ ಮಾಡಲು ಪ್ರಯತ್ನಿಸಿದ್ದು, ಇದೀಗ ಸಕತ್ ವೈರಲ್ ಆಗಿದೆ.
ಕಿಲಿ ಪಾಲ್ ಇತ್ತೀಚೆಗೆ ಪೋಸ್ಟ್ ಮಾಡಿದ ರೀಲ್‌ನಲ್ಲಿ, ಅವರು ತಮ್ಮ ಸಹೋದರಿ ನೀಮಾ ಅವರೊಂದಿಗೆ ಟ್ರೆಂಡಿಂಗ್ ಹಾಡಿಗೆ ನೃತ್ಯ ಮಾಡುವುದನ್ನು ನಾವು ನೋಡಬಹುದು. ಮೂಲತಃ ಐಶ್ವರ್ಯಾ ರಂಗರಾಜನ್, ವಿ. ಹರಿಕೃಷ್ಣ, ಮತ್ತು ಯೋಗರಾಜ್ ಭಟ್ ಅವರು ಹಾಡಿರುವ ಕನ್ನಡ ಹಾಡಿಗೆ ಸೂಪರ್ ಆಗಿ ನರ್ತಿಸಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ದೃಶ್ಯಗಳು ವೈರಲ್ ಆಗಿವೆ. ಇದಾಗಲೇ ಒಂದು ಲಕ್ಷದಷ್ಟು ಜನರು ಇದನ್ನು ಇಷ್ಟಪಟ್ಟಿದ್ದಾರೆ.
https://youtu.be/uo7FD7Q-cHg