alex Certify ಮದುವೆ ದಿನ ಚಂಡೆ ಬಾರಿಸಿದ ವಧು, ವರ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನ ಚಂಡೆ ಬಾರಿಸಿದ ವಧು, ವರ; ವಿಡಿಯೋ ವೈರಲ್

ಇತ್ತೀಚಿಗೆ ಮದುವೆಗಳಲ್ಲಿ ವಧು ಮತ್ತು ವರ ಉತ್ಸುಕತೆಯಿಂದ ಭಾಗವಹಿಸೋ ವಿಶೇಷ ವಿಡಿಯೋಗಳು ವೈರಲ್ ಆಗ್ತಿದೆ. ಆ ಸಾಲಿಗೆ ಮತ್ತೊಂದು ವಿಡಿಯೋ ಸೇರಿದ್ದು,ಕೇರಳದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ಉತ್ಸಾಹದಿಂದ ಡ್ರಮ್ ಬಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಕ್ಲಿಪ್‌ನಲ್ಲಿ, ವಧು ಕೇರಳದ ಸಂಗೀತ ವಾದ್ಯವಾದ ಚೆಂಡೆಯನ್ನು ಉತ್ಸಾಹದಿಂದ ಬಾರಿಸುತ್ತಿರುವುದನ್ನು ಕಾಣಬಹುದು. ಚೆಂಡೆ ಬಾರಿಸುತ್ತಿರುವ ಇತರೆ ಕಲಾವಿದರು ಸಹ ಉತ್ಸಾಹದಿಂದ ವಧುಗೆ ಸಾಥ್ ನೀಡಿದ್ದಾರೆ.

ಮಾಹಿತಿಗಳ ಪ್ರಕಾರ ಕೇರಳದ ಗುರುವಾಯೂರ್ ದೇವಾಲಯದಲ್ಲಿ ವಧುವಿನ ತಂದೆ ಮತ್ತು ವರನು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ರು.

ವಧು ಮತ್ತು ವರರಿಬ್ಬರ ಮುಖದಲ್ಲಿ ಸಂತೋಷವು ಮೋಡಿಮಾಡುವಂತಿದೆ. ವಧುವಿನ ತಂದೆ ಕೊನೆಯಲ್ಲಿ ನೃತ್ಯಕ್ಕೆ ಸೇರುವುದು ಅದ್ಭುತವಾಗಿದೆ. ಈ ವಿಡಿಯೋವನ್ನ ಹಲವರು ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...