alex Certify ರಾಮೆನ್​ ಸೂಪ್​ನಿಂದ ಉತ್ಪತ್ತಿಯಾಗುವ ಇಂಧನದಿಂದ ಚಲಿಸುತ್ತೆ ಈ ರೈಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮೆನ್​ ಸೂಪ್​ನಿಂದ ಉತ್ಪತ್ತಿಯಾಗುವ ಇಂಧನದಿಂದ ಚಲಿಸುತ್ತೆ ಈ ರೈಲು…!

ಪರ್ಯಾಯ ಇಂಧನ ಮೂಲಗಳ ಬಗ್ಗೆ ಜಗತ್ತಿನ ವಿವಿಧ ಕಡೆ ಸಂಶೋಧನೆಗಳು ನಡೆಯುತ್ತಿವೆ. ಎಥೆನಾಲ್​ ಬಗ್ಗೆ ಹೆಚ್ಚಿನ ಪ್ರಯೋಗಗಳು ನಡೆದಿವೆ. ಈ ನಡುವೆ ಜಪಾನ್​ನಲ್ಲಿ ರೈಲು ರಾಮೆನ್​ ಸೂಪ್​ನಿಂದ ಸಂಚರಿಸುತ್ತಿದೆ.

ರಾಮೆನ್​ ಸೂಪ್​ ಅನ್ನು ಸಾಮಾನ್ಯವಾಗಿ ಚಿಕನ್​ ಅಥವಾ ಹಂದಿಮಾಂಸ ಬಳಸಿ ತಯಾರಿಸಲಾಗುತ್ತದೆ, ಕೆಲವು ಆಧುನಿಕ ರಾಮೆನ್​ ಸೂಪ್​ ತರಕಾರಿ ಆಧಾರಿತವಾಗಿರಬಹುದು.

ಜಪಾನ್​ನಲ್ಲಿ ಓಪನ್​ ಟಾಪ್​ ಸೈಟ್​ ಸೀಯಿಂಗ್​ಗೆ ಮೀಸಲಾದ ರೈಲು ತನ್ನ ಇಂಧನದ ವಿಷಯದಲ್ಲಿ ಚರ್ಚೆಗೆ ತುತ್ತಾಗಿದೆ. ಕ್ಯುಶು ದ್ವೀಪಗಳಲ್ಲಿ ಪ್ರವಾಸಿಗರನ್ನು ಸೈಟ್​ ಸೀಯಿಂಗ್​ಗೆ ಕರೆದೊಯ್ಯುವ ರೈಲು ರಾಮೆನ್​ ಸೂಪ್​ನಿಂದ ಸಿದ್ಧವಾದ ಇಂಧನದಿಂದ ಚಲಿಸುತ್ತದೆ.

ಈ ವಿಶಿಷ್ಟ ಜೈವಿಕ ಡೀಸೆಲ್​ ಇಂಧನದ ಕಲ್ಪನೆಯು ನಿಶಿದಾ ಶೋನ್​ನ ಸಂಸ್ಥಾಪಕ ಮಸುಮಿ ನಿಶಿದಾ ಅವರಿಂದ ಸಿದ್ಧವಾಗಿದೆ. ಬಳಕೆ ನಂತರ ಉಳಿದ ರಾಮೆನ್​ ಸೂಪ್​ ಮತ್ತು ಬಳಸಿದ ಅಡುಗೆ ಎಣ್ಣೆಯಿಂದ ಹೊರತೆಗೆಯಲಾದ ಕೊಬ್ಬನ್ನು ಬಳಸಿ, ನಿಶಿದಾ ಜೈವಿಕ ಇಂಧನವನ್ನು ಕಂಡುಹಿಡಿದರು, ಅದು ಈಗ ಲೋಕೋಮೋಟಿವ್​ಗೆ ಇಂಧನ ರೂಪದಲ್ಲಿ ಶಕ್ತಿ ನೀಡುತ್ತದೆ.

ರೈಲ್ರೋಡ್​ ಕಂಪನಿಯು ಜೂನ್​ ಮಧ್ಯದಲ್ಲಿ ಹಲವಾರು ಪರೀಕ್ಷೆ ನಡೆಸಿತು ಮತ್ತು ಎಂಜಿನ್​ಗೆ ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಈ ಇಂಧನವು ಕಪ್ಪು ಹೊಗೆ ಅಥವಾ ಡೀಸೆಲ್​ ಬರ್ನ್​ ಆದ ನಂತರ ಬರುವ ವಾಸನೆಯನ್ನು ಉಂಟುಮಾಡುವುದಿಲ್ಲ. ಜೈವಿಕ ಡೀಸೆಲ್​ ಉತ್ಪಾದನೆಯ ವೆಚ್ಚವು ಲಭ್ಯವಿರುವ ಡೀಸೆಲ್​ನಷ್ಟೇ ಇತ್ತು.

ಕಂಪನಿಯು ಪ್ರಸ್ತುತ 2,000 ರೆಸ್ಟೋರೆಂಟ್​ಗಳಿಂದ ಅಡುಗೆ ಎಣ್ಣೆ ತ್ಯಾಜ್ಯವನ್ನು ಖರೀದಿಸುತ್ತದೆ, ದಿನಕ್ಕೆ 3,000 ಲೀಟರ್​ ಇಂಧನವನ್ನು ಉತ್ಪಾದಿಸಲು ಸಾಮರ್ಥ್ಯ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...