ಪರ್ಯಾಯ ಇಂಧನ ಮೂಲಗಳ ಬಗ್ಗೆ ಜಗತ್ತಿನ ವಿವಿಧ ಕಡೆ ಸಂಶೋಧನೆಗಳು ನಡೆಯುತ್ತಿವೆ. ಎಥೆನಾಲ್ ಬಗ್ಗೆ ಹೆಚ್ಚಿನ ಪ್ರಯೋಗಗಳು ನಡೆದಿವೆ. ಈ ನಡುವೆ ಜಪಾನ್ನಲ್ಲಿ ರೈಲು ರಾಮೆನ್ ಸೂಪ್ನಿಂದ ಸಂಚರಿಸುತ್ತಿದೆ.
ರಾಮೆನ್ ಸೂಪ್ ಅನ್ನು ಸಾಮಾನ್ಯವಾಗಿ ಚಿಕನ್ ಅಥವಾ ಹಂದಿಮಾಂಸ ಬಳಸಿ ತಯಾರಿಸಲಾಗುತ್ತದೆ, ಕೆಲವು ಆಧುನಿಕ ರಾಮೆನ್ ಸೂಪ್ ತರಕಾರಿ ಆಧಾರಿತವಾಗಿರಬಹುದು.
ಜಪಾನ್ನಲ್ಲಿ ಓಪನ್ ಟಾಪ್ ಸೈಟ್ ಸೀಯಿಂಗ್ಗೆ ಮೀಸಲಾದ ರೈಲು ತನ್ನ ಇಂಧನದ ವಿಷಯದಲ್ಲಿ ಚರ್ಚೆಗೆ ತುತ್ತಾಗಿದೆ. ಕ್ಯುಶು ದ್ವೀಪಗಳಲ್ಲಿ ಪ್ರವಾಸಿಗರನ್ನು ಸೈಟ್ ಸೀಯಿಂಗ್ಗೆ ಕರೆದೊಯ್ಯುವ ರೈಲು ರಾಮೆನ್ ಸೂಪ್ನಿಂದ ಸಿದ್ಧವಾದ ಇಂಧನದಿಂದ ಚಲಿಸುತ್ತದೆ.
ಈ ವಿಶಿಷ್ಟ ಜೈವಿಕ ಡೀಸೆಲ್ ಇಂಧನದ ಕಲ್ಪನೆಯು ನಿಶಿದಾ ಶೋನ್ನ ಸಂಸ್ಥಾಪಕ ಮಸುಮಿ ನಿಶಿದಾ ಅವರಿಂದ ಸಿದ್ಧವಾಗಿದೆ. ಬಳಕೆ ನಂತರ ಉಳಿದ ರಾಮೆನ್ ಸೂಪ್ ಮತ್ತು ಬಳಸಿದ ಅಡುಗೆ ಎಣ್ಣೆಯಿಂದ ಹೊರತೆಗೆಯಲಾದ ಕೊಬ್ಬನ್ನು ಬಳಸಿ, ನಿಶಿದಾ ಜೈವಿಕ ಇಂಧನವನ್ನು ಕಂಡುಹಿಡಿದರು, ಅದು ಈಗ ಲೋಕೋಮೋಟಿವ್ಗೆ ಇಂಧನ ರೂಪದಲ್ಲಿ ಶಕ್ತಿ ನೀಡುತ್ತದೆ.
ರೈಲ್ರೋಡ್ ಕಂಪನಿಯು ಜೂನ್ ಮಧ್ಯದಲ್ಲಿ ಹಲವಾರು ಪರೀಕ್ಷೆ ನಡೆಸಿತು ಮತ್ತು ಎಂಜಿನ್ಗೆ ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಈ ಇಂಧನವು ಕಪ್ಪು ಹೊಗೆ ಅಥವಾ ಡೀಸೆಲ್ ಬರ್ನ್ ಆದ ನಂತರ ಬರುವ ವಾಸನೆಯನ್ನು ಉಂಟುಮಾಡುವುದಿಲ್ಲ. ಜೈವಿಕ ಡೀಸೆಲ್ ಉತ್ಪಾದನೆಯ ವೆಚ್ಚವು ಲಭ್ಯವಿರುವ ಡೀಸೆಲ್ನಷ್ಟೇ ಇತ್ತು.
ಕಂಪನಿಯು ಪ್ರಸ್ತುತ 2,000 ರೆಸ್ಟೋರೆಂಟ್ಗಳಿಂದ ಅಡುಗೆ ಎಣ್ಣೆ ತ್ಯಾಜ್ಯವನ್ನು ಖರೀದಿಸುತ್ತದೆ, ದಿನಕ್ಕೆ 3,000 ಲೀಟರ್ ಇಂಧನವನ್ನು ಉತ್ಪಾದಿಸಲು ಸಾಮರ್ಥ್ಯ ಹೊಂದಿದೆ.