ಕಾಡಿನ ಮೂಲಕ ಹಾದುಹೋಗುವ ರಸ್ತೆಗಳು ನಿಸ್ಸಂದೇಹವಾಗಿ ಸವಾಲುಗಳಿಂದ ತುಂಬಿರುತ್ತವೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ.
ಅರಣ್ಯವು ಪ್ರಾಣಿಗಳ ನೈಸರ್ಗಿಕ ಆವಾಸ ಸ್ಥಾನವಾಗಿರುವುದರಿಂದ, ಈ ರಸ್ತೆಗಳಲ್ಲಿ ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಮುಖಾಮುಖಿ ಸಂಭವಿಸುತ್ತದೆ. ಇದೇ ರೀತಿಯ ಎನ್ಕೌಂಟರ್ನ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೊದಲ್ಲಿ, ಕಾಡಿನ ಮಧ್ಯದ ರಸ್ತೆಯೊಂದರಲ್ಲಿ ಕಾಡಾನೆಯೊಂದು ಬರುತ್ತಿದ್ದು, ಅದು ತನ್ನ ಪಾಡಿಗೆ ತಾನು ಸಾಗದೇ, ತನಗಾಗುತ್ತಿದ್ದ ತುರಿಕೆ ಕಡಿಮೆ ಮಾಡಿಕೊಳ್ಳಲು ಅದು ದೇಹವನ್ನು ಕಾರಿಗೆ ಉಜ್ಜುತ್ತಿರುವುದನ್ನು ಕಾಣಬಹುದು.
ಅದು ಕಾರಿಗೆ ಹೆದರದೇ ತಾನೇ ಉಜ್ಜಿಕೊಳ್ಳತೊಡಗಿತು. ಮೊದಲು ಒಂದು ಕಾಲಿನಿಂದ ಕಾರಿನ ಟೈರ್ ಮೇಲೆ ಏರುತ್ತದೆ. ನಂತರ, ಅದು ಕಾರಿನ ಬಾನೆಟ್ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ. ಸೈಡ್ ವ್ಯೂ ಮಿರರ್ ಅನ್ನು ಒಡೆಯುತ್ತಾ ಕೆಳಗಿಳಿಯುತ್ತದೆ.
ಕೊನೆಯಲ್ಲಿ ಹಾನಿಯಾದ ಕಾರು ರಿವರ್ಸ್ ಗೇರ್ನಲ್ಲಿ ತಪ್ಪಿಸಿಕೊಂಡು ಹಿಂದೆ ಬಂದಾಗ ಆನೆ ಗಾಬರಿಯಿಂದ ಕಾಡಿನಲ್ಲಿ ಓಡುತ್ತದೆ. ಒಂದು ದಿನದಲ್ಲಿ ಈ ವಿಡಿಯೋ 2.1 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆಯಿತು. ಸಾವಿರಾರು ಮಂದಿ ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.