ಭಾರತೀಯ ವಾಯುಪಡೆಗೆ ಸೇರಿದ ಎಂಐ – 17 ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ರೋಚಮ್ ಹೆಲಿಪ್ಯಾಡ್ನಲ್ಲಿ ಕ್ರ್ಯಾಶ್ಲ್ಯಾಂಡ್ ಆಗಿದೆ. ಈ ಹೆಲಿಕಾಪ್ಟರ್ನಲ್ಲಿ ಇಬ್ಬರು ಪೈಲಟ್ ಹಾಗೂ ಮೂವರು ಸಿಬ್ಬಂದಿ ಇದ್ದರು ಎನ್ನಲಾಗಿದೆ. ಗುರುವಾರ ಈ ಹೆಲಿಕಾಪ್ಟರ್ ಕ್ರ್ಯಾಶ್ ಲ್ಯಾಂಡ್ ಆಗಿದ್ದು ಇದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
23 ಸೆಕೆಂಡ್ಗಳ ವಿಡಿಯೋದಲ್ಲಿ ಐಎಎಫ್ ಚಾಪರ್ ತನ್ನ ನಿಯಂತ್ರಣ ಕಳೆದುಕೊಂಡಿದ್ದನ್ನು ಕಾಣಬಹುದಾಗಿದೆ. ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ರೋಚಮ್ನಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿದೆ. ಹೆಲಿಕಾಪ್ಟರ್ನಲ್ಲಿ ಉಂಟಾದ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ.
ಈ ಹೆಲಿಕಾಪ್ಟರ್ನ ಮುಖಾಂತರ ಹಯುಲಿಯಾಂಗ್ನಿಂದ ಚೀನಾ ಹಾಗೂ ಮ್ಯಾನ್ಮಾರ್ ಗಡಿಯಲ್ಲಿರುವ ಅಂಜಾವ್ ಜಿಲ್ಲೆಯ ರೋಚಾಮ್ವರೆಗೆ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಈ ಅವಘಡದಿಂದಾಗಿ ಹೆಲಿಕಾಪ್ಟರ್ನಲ್ಲಿದ್ದ ಇಂಜಿನಿಯರ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ ಪೈಲಟ್ ಹಾಗೂ ಇತರೆ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.