alex Certify ಕಾರಿಗೆ ಸುತ್ತುವರಿದು ಸಂಚಾರಕ್ಕೆ ಬ್ರೇಕ್​ ಹಾಕಿದ ಬಾತುಕೋಳಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿಗೆ ಸುತ್ತುವರಿದು ಸಂಚಾರಕ್ಕೆ ಬ್ರೇಕ್​ ಹಾಕಿದ ಬಾತುಕೋಳಿಗಳು

ನೂರಾರು ಬಾತುಕೋಳಿಗಳು ವೃತ್ತಾಕಾರದಲ್ಲಿ ಕಾರಿನ ಸುತ್ತಲೂ ಸಾಗಿ ರಸ್ತೆಯಲ್ಲಿದ್ದ ಕಾರಿನ ಸಂಚಾರಕ್ಕೆ ಅಡ್ಡಿ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಾರಿನೊಳಗಿದ್ದ ವ್ಯಕ್ತಿ ದಾಖಲಿಸಿದ 14 ಸೆಕೆಂಡುಗಳ ಕ್ಲಿಪ್​ನಲ್ಲಿ, ಬಾತುಕೋಳಿಗಳು ರಸ್ತೆಯ ಮೇಲೆ ಸುತ್ತಲೂ ಸಾಗಿ ಕಾರನ್ನು ಅಡ್ಡಗಟ್ಟುವುದನ್ನು ಕಾಣಬಹುದು. ಕೆಲವು ಕಾರುಗಳು ರಸ್ತೆಯಲ್ಲಿ ನಿಂತಿದ್ದು, ಎರಡೂ ಬದಿಗಳಿಂದ ಬಾತುಕೋಳಿಗಳು ಸಂಪೂರ್ಣ ಆವರಿಸಿವೆ.

ಡಿಜಿಟಲ್​ ಪ್ಲಾಟ್​ಫಾರ್ಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ತಕ್ಷಣ ತಮಾಷೆಯ ಕಾಮೆಂಟ್​ಗಳು ಹರಿದುಬಂದಿವೆ. ನೀವು ಇಂದು ಏಕೆ ತಡವಾಗಿ ಬಂದಿದ್ದೀರಿ? ಇದು ಬಾತುಕೋಳಿಗಳು, ಸರ್​ ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು, ಬಾಸ್​, ನಾನು ಕೆಲಸಕ್ಕೆ ಹೋಗುವ ದಾರಿಯಲ್ಲಿ ಏನಾಯಿತು ಎಂಬುದನ್ನು ನೀವು ಎಂದಿಗೂ ನಂಬುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಬಾತುಕೋಳಿಗಳ ಗುಂಪು ಶಾಂತಿಯುತವಾಗಿ ವಾಹನದೊಳಗಿನ ವ್ಯಕ್ತಿಯ ವಿರುದ್ಧ ಪ್ರತಿಭಟಿಸುತ್ತಿವೆ ಎಂದು ಒಬ್ಬರು ಬರೆದಿದ್ದರೆ, ಕಾರಿನ ವಾರಂಟಿ ಅವಧಿ ಮುಗಿಯಲಿದೆ ಎಂದು ಅವರಿಗೆ ತಿಳಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...