alex Certify ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಆಹಾರ ಹೇಗೆ ಸೇವಿಸುತ್ತಾರೆ ಗೊತ್ತಾ…? ವೈರಲ್ ವಿಡಿಯೋದಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಆಹಾರ ಹೇಗೆ ಸೇವಿಸುತ್ತಾರೆ ಗೊತ್ತಾ…? ವೈರಲ್ ವಿಡಿಯೋದಲ್ಲಿದೆ ವಿವರ

ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ನಂತರ ಗಗನಯಾತ್ರಿಗಳು ಅಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಬಾಹ್ಯಾಕಾಶದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಗಗನಯಾತ್ರಿಗಳಿಗೆ ಇಲ್ಲಿರುವಾಗಲೇ ತರಬೇತಿ ನೀಡಲಾಗುತ್ತದೆ. ಆದರೆ, ಗಗನಯಾತ್ರಿಗಳು ರಾಕೆಟ್‌ನಲ್ಲಿದ್ದಾಗ ಹೇಗೆ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ ಎಂಬುದು ಹಲವರಲ್ಲಿ ಕುತೂಹಲವಿರುತ್ತದೆ.

ರಾಕೆಟ್ ಒಳಗೆ ಏನಾಗುತ್ತದೆ ಎಂದು ತಿಳಿಯುವುದು ಅಷ್ಟು ಸುಲಭವಲ್ಲ. ಆ ರಹಸ್ಯಗಳನ್ನು ಬಹಿರಂಗಪಡಿಸಲು ನಿರ್ಬಂಧಗಳಿವೆ. ಆದಾಗ್ಯೂ, ಕೆಲವು ಗಗನಯಾತ್ರಿಗಳು ಬಾಹ್ಯಾಕಾಶ ಪ್ರಯಾಣದ ನಂತರ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಇಂತಹ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಹೇಗೆ ತಿನ್ನುತ್ತಾರೆ, ಕುಡಿಯುತ್ತಾರೆ ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶ ಪ್ರಯಾಣದ ಸಮಯದಲ್ಲಿ, ಗಗನಯಾತ್ರಿಗಳು ತಮ್ಮ ಆಹಾರಗಳನ್ನು ತೆರೆದಾಗ, ಗುರುತ್ವಾಕರ್ಷಣೆಯ ಕೊರತೆಯಿಂದಾಗಿ ಆಹಾರವು ಹಾರಲು ಪ್ರಾರಂಭಿಸುತ್ತದೆ.

ಇನ್ನು ವಿಡಿಯೋದಲ್ಲಿ ಕಾಫಿ ಮಾಡುವುದನ್ನು ಕೂಡ ತೋರಿಸಲಾಗಿದೆ. ಕಾಫಿ ಪುಡಿಯನ್ನು ಹೊಂದಿರುವ ಪ್ಯಾಕೆಟ್‌ನಲ್ಲಿ ಬಿಸಿನೀರನ್ನು ಹಾಕಿದ ನಂತರ, ಗಗನಯಾತ್ರಿಗಳು ಅದನ್ನು ಸ್ಟ್ರಾದೊಂದಿಗೆ ಕುಡಿಯುತ್ತಾರೆ. ಇದಲ್ಲದೆ, ಅವರು ಸೇವಿಸುವ ಹೆಚ್ಚಿನ ಆಹಾರವು ದ್ರವ ರೂಪದಲ್ಲಿರುತ್ತದೆ. ತರಕಾರಿ ಕೂಡ ಒಣಗಿದ್ದು, ಇದನ್ನು ಕೂಡ ದ್ರವ ರೂಪದ ರೀತಿಯಲ್ಲೇ ಸೇವಿಸುತ್ತಾರೆ.

ಒಂದು ವೇಳೆ ಆಹಾರವು ಚೆಲ್ಲಿದರೆ, ಅದನ್ನು ಸಂಗ್ರಹಿಸಲು ತುಂಬಾ ಕಷ್ಟವಾಗುತ್ತದೆ. ಹೀಗಾಗಿ ಬಹಳ ಜಾಗರೂಕತೆಯಿಂದ ಸೇವಿಸಬೇಕು. ಜೇನುತುಪ್ಪ ಕೂಡ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಯಾವ ರೀತಿಯಾಗುತ್ತದೆ ಎಂಬ ಬಗ್ಗೆ ಗಗನಯಾತ್ರಿಗಳು ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ.

ವಿಡಿಯೋ ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಗಗನಯಾತ್ರಿಗಳು ಕೆಲಸ ಮಾಡುತ್ತಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದಾರೆ. ಬಾಹ್ಯಾಕಾಶದಲ್ಲಿ ಜೀವನವು ಬಹಳ ಕಷ್ಟಕರವಾಗಿದೆ ಎಂದು ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

https://youtu.be/tC4yZZIzl8E

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...