ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಈ ಮಾತಿಗೆ ಸಾಕ್ಷಿ ಎಂಬಂತೆ ಒಕ್ಲಹೋಮದ ನಿವಾಸಿಯೊಬ್ಬರು ತಮ್ಮ ಮುದ್ದಿನ ಬೆಕ್ಕನ್ನು ಕಾಪಾಡುವ ಸಲುವಾಗಿ ಬೃಹತ್ ಮರವೊಂದನ್ನ ಏರಿ ಅಪಾಯಕ್ಕೆ ಸಿಲುಕಿದ್ದಾರೆ.
ಮರದ ತುದಿಯನ್ನ ಏರಿದ್ದ ಬೆಕ್ಕೊಂದು ವಾಪಸ್ ಬರಲಾಗದೇ ಅಪಾಯದಲ್ಲಿತ್ತು. ತನ್ನ ಬೆಕ್ಕನ್ನ ಈ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮರ ಹತ್ತಿದ ವ್ಯಕ್ತಿ ಕೂಡ ಅಪಾಯಕ್ಕೆ ಸಿಲುಕಿದ್ದಾನೆ. ಕೊನೆಗೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದೆ.
ರಕ್ಷಣಾ ಕಾರ್ಯದ ವಿಡಿಯೋವನ್ನ ಅಧಿಕೃತ ಫೇಸ್ಬುಕ್ನಲ್ಲಿ ಪೇಜ್ನಲ್ಲಿ ಟುಸ್ಲಾ ಅಗ್ನಿಶಾಮಕ ದಳ ಶೇರ್ ಮಾಡಿ ಘಟನೆಯ ಬಗ್ಗೆ ವಿವರಣೆ ನೀಡಿದೆ. ಬೆಕ್ಕನ್ನು ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಮಾಲೀಕನನ್ನ ಏರಿಯಲ್ ಸಾಧನ ಸಹಾಯದಿಂದ ಬಚಾವು ಮಾಡಲಾಗಿದೆ. ಇತ್ತ ಬೆಕ್ಕನ್ನೂ ಕೂಡ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.