ಮದುವೆ ಆರತಕ್ಷತೆಯಲ್ಲಿ ವರನೊಬ್ಬ ತನ್ನ ತಾಯಿ ಮತ್ತು ಅತ್ತೆಯೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. 1998 ರ ಬ್ಲಾಕ್‌ಬಸ್ಟರ್ ಚಲನಚಿತ್ರ ಕುಚ್ ಕುಚ್ ಹೋತಾ ಹೈ ಯ ಜನಪ್ರಿಯ ಹಾಡಿನ ಲಡ್ಕಿ ಬಡಿ ಅಂಜಾನಿ ಹೈ ಗೀತೆಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ವರ ಮಧ್ಯದಲ್ಲಿ ನಿಂತಿದ್ದರೆ, ಅಮ್ಮ ಹಾಗೂ ಅತ್ತೆ ಆತನ ಅಕ್ಕ-ಪಕ್ಕ ನಿಂತು ಡ್ಯಾನ್ಸ್ ಮಾಡಿದ್ದಾರೆ. ಅಟ್ಲಾಂಟಾ ಮೂಲದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವ ವಧು ಜುಲ್ಲಿ ಪಟೇಲ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಡಿಗೆ ನೃತ್ಯ ಮಾಡಿದ ವ್ಯಕ್ತಿ ತನ್ನ ಪತಿ ಶಾಹಿಲ್ ಎಂದು ಹೇಳಿದ್ದಾರೆ. ಈ ಹಾಡಿಗೆ ಇಬ್ಬರೂ ತಾಯಂದಿರ ಜೊತೆ ಕುಣಿಯಬೇಕು ಎಂಬುದು ಶಾಹಿಲ್ ಅವರ ಆಲೋಚನೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಜೀವವಿಮೆ ಪಡೆಯಲು ನಡೆದಿತ್ತು ಬಹುದೊಡ್ಡ ಸಂಚು….! ಅಮಾಯಕನನ್ನು ಕೊಂದು ವಿಮೆ ಪಡೆಯಲು ಮುಂದಾದವರ ಹೆಡೆಮುರಿ ಕಟ್ಟಿದ ಖಾಕಿ
ವಿಡಿಯೋವನ್ನು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದ್ದರೂ, 3.12 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳು ಹಾಗೂ 5 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
https://youtu.be/XWw-eCl1X1w