alex Certify ಕತ್ತೆ ಏರಿ ಬಂದ ಚೆಲುವ ರಾಜಕುಮಾರ…….ವರನ ವೇಷಕ್ಕೆ ಸುಸ್ತಾದ ವಧು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತೆ ಏರಿ ಬಂದ ಚೆಲುವ ರಾಜಕುಮಾರ…….ವರನ ವೇಷಕ್ಕೆ ಸುಸ್ತಾದ ವಧು…!

ನವದೆಹಲಿ: ಭಾರತೀಯ ಮದುವೆಗಳಲ್ಲಿ ಹತ್ತು ಹಲವು ಸಂಪ್ರದಾಯಗಳು. ಒಂದೊಂದು ಕಡೆ ಒಂದೊಂದು ರೀತಿಯ ಸಂಸ್ಕೃತಿ ಆಚಾರ ವಿಚಾರಗಳು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ವರನನ್ನು ಮದುವೆಯ ಮಂಟಪಕ್ಕೆ ಕುದುರೆಯ ಮೇಲೆ ಕರೆದುಕೊಂಡು ಬರುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಮದುಮಗ ಕುದುರೆಯ ಬದಲು ಕತ್ತೆ ಏರಿ ಬಂದಿದ್ದು ಇದರ ವಿಡಿಯೋ ಭಾರಿ ವೈರಲ್​ ಆಗಿದೆ.

ಕುದುರೆಯ ಬದಲು ಇಂದು ಕೆಲವು ಸಿರಿವಂತರು ಹೆಲಿಕಾಪ್ಟರ್ ಮೇಲೇರಿ ಮದುವೆ ಮನೆಗೆ ಬಂದಿರುವುದು ಇದೆ. ಆದರೆ ಕತ್ತೆಯ ಮೇಲೆ ಬಂದಿರುವ ವರನ ಕಂಡು ವಧು ಹಾಗೂ ಆಕೆಯ ಕುಟುಂಬಸ್ಥರು ಕಕ್ಕಾಬಿಕ್ಕಿಯಾಗಿರುವ ಘಟನೆ ನಡೆದಿದೆ. ಫನ್‌ಟಾಪ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಜನರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ಸಲ್ಮಾನ್-ಎ- ಇಷ್ಕ್ ಸಿನಿಮಾದ ತೇನು ಲೆಕೆ ಹಾಡಿನ ಹಿನ್ನೆಲೆಯಲ್ಲಿ ವರ ಕತ್ತೆಯ ಮೇಲೆ ಏರಿ ಬರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ‘ಗೋಡಿ ನಹಿ ತೋ ಗಡಿ ಸಹಿ’ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಇತ್ತ ಕತ್ತೆ ಏರಿ ಬಂದ ವರನ ಮುಂದೆ ನೆಂಟರಿಷ್ಟರು ಕುಣಿಯುತ್ತಿದ್ದು, ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದರೆ ಮತ್ತೆ ಕೆಲವರು ವರನ ತಲೆಯ ಸುತ್ತ ಹಣವನ್ನು ಸುತ್ತಿ ದೃಷ್ಟಿ ತೆಗೆಯುತ್ತಿದ್ದಾರೆ. ವಧುವಿನ ಕಡೆಯವರು ಮಾತ್ರ ಕಕ್ಕಾಬಿಕ್ಕಿಯಾಗಿದ್ದಾರೆ.

ಈ ವಿಡಿಯೋವನ್ನು ಹಿಂದಿ ಸಿನಿಮಾದ ಕೆಲ ಸೀನ್‌ಗಳನ್ನು ಸೇರಿಸಿ ಎಡಿಟ್ ಮಾಡಿ ಹಾಕಲಾಗಿದೆ. ವಿಡಿಯೋದ ಕೊನೆಯಲ್ಲಿ ಜಾಲಿ ಎಲ್‌ಎಲ್‌ಬಿ 2 ಸಿನಿಮಾದಲ್ಲಿ ಅರ್ಷದ್ ವಾರ್ಸಿಯ ಡೈಲಾಗ್ ಭಾಗ, ‘ಯಾರು ಈ ಜನಗಳು, ಎಲ್ಲಿಂದ ಬಂದಿದ್ದಾರೆ’ ಎಂದು ಕೇಳುವ ದೃಶ್ಯವನ್ನು ಸೇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...