alex Certify ಮೊಸಳೆಯಂತೆ ತೋರುವ ಈ ಬೃಹದಾಕಾರದ ಜೀವಿ ಕಂಡು ನೆಟ್ಟಿಗರು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆಯಂತೆ ತೋರುವ ಈ ಬೃಹದಾಕಾರದ ಜೀವಿ ಕಂಡು ನೆಟ್ಟಿಗರು ಕಂಗಾಲು

ಜಗತ್ತು ಅಗಾಧವಾದ ಕುತೂಹಲಕಾರಿಯಾದ ದೈತ್ಯಾಕಾರದ ಜೀವಿಗಳಿಂದ ತುಂಬಿದೆ, ಕೆಲವೊಮ್ಮೆ ಅವು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಹೀಗೆ ಬೃಹದಾಕಾರದ ದೈತ್ಯ ಪ್ರಾಣಿಯೊಂದು ರಸ್ತೆ ಕ್ರಾಸ್​ ಮಾಡುವ ವಿಡಿಯೋ ವೈರಲ್​ ಆಗಿದೆ.

ನೋಡಲು ಇದು ಮೊಸಳೆಯಂತೆಯೇ ಇದೆ. ಆದರೆ ಇದು ಮೊಸಳೆ ಎಂದರೆ ಸುಲಭದಲ್ಲಿ ನಂಬಲು ಸಾಧ್ಯವಾಗದ ರೀತಿಯಲ್ಲಿ ಇದ್ದು, ನೆಟ್ಟಿಗರು ನಿಬ್ಬೆರಗಾಗುತ್ತಿದ್ದಾರೆ.

ವಾಸ್ತವದಲ್ಲಿ ಇದು ದೈತ್ಯ ಮೊಸಳೆ ಎನ್ನಲಾಗಿದೆ. ಸಾಮಾನ್ಯ ಮೊಸಳೆಗಿಂತಲೂ ಭಿನ್ನವಾಗಿದ್ದು, ಇದು ತನ್ನ ನಾಲ್ಕು ಕಾಲುಗಳ ಮೇಲೆ ನಿಲ್ಲುವ ಮತ್ತು ನಡೆಯುವ ಸಾಮರ್ಥ್ಯ ಹೊಂದಿದೆ. ಬಹುತೇಕ ಸಿಂಹದಷ್ಟೇ ದೊಡ್ಡದಾಗಿದೆ. ಬಾಲವು ತುಂಬಾ ದೊಡ್ಡದಾಗಿದೆ,

ಇದರ ವೀಡಿಯೊ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಟ್ವೀಟ್ ಸ್ವತಃ 6.89 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಇಲ್ಲಿಯವರೆಗೆ 6.7 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಜನರು ಇದನ್ನು ಡೈನೋಸಾರ್​ ಇರಬೇಕು ಎನ್ನುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...