
ಕ್ರಿಸ್‌ಮಸ್ ಹತ್ತಿರದಲ್ಲಿದೆ, ಹಲವು ದೇಶಗಳಲ್ಲಿ ಈಗ ಭರ್ಜರಿ ತಯಾರಿ ನಡೆಯುತ್ತಿದೆ. ಕ್ರೈಸ್ತರು ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರ ಮನರಂಜಿಸಲು ಹೊಸ ಹೊಸ ತಯಾರಿ ನಡೆಸುವುದು ಈ ದಿನಗಳಲ್ಲಿ ಮಾಮೂಲಾಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಈ ಸಂದರ್ಭದಲ್ಲಿ ತಮಾಷೆ ಮಾಡುವುದು ಮಾಮೂಲು ಆಗಿದೆ. ಸ್ನೇಹಿತರನ್ನು ರಂಜಿಸಲು ಹಲವು ಬಗೆಯ ತಮಾಷೆಗಳನ್ನು ಮಾಡುತ್ತಿರುತ್ತಾರೆ. ಅಂಥದ್ದೇ ವಿಡಿಯೋ ಇದೀಗ ವೈರಲ್ ಆಗಿದೆ. ತಮ್ಮ ಸ್ನೇಹಿತರ ಕೋಣೆಯನ್ನು ಅಲಂಕಾರ ಮಾಡುವ ಸ್ನೇಹಿತರ ಕುರಿತ ವಿಡಿಯೋ ಇದಾಗಿದೆ.
ರೂಮ್‌ಮೇಟ್‌ಗಳು ತಮ್ಮ ಸ್ನೇಹಿತರ ಕೋಣೆಯನ್ನು ಉಡುಗೊರೆ ರ್ಯಾಪರ್ನಲ್ಲಿ ಪ್ಯಾಕ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೋಣೆಯ ಗೋಡೆಗಳು, ಬಾಗಿಲುಗಳು ಮತ್ತು ವಾಡ್ರೋಬ್ನಿಂದ ಹಿಡಿದು ಕೋಣೆಯ ನೆಲ, ಪೀಠೋಪಕರಣಗಳು ಮತ್ತು ದಿಂಬುಗಳವರೆಗೆ ಎಲ್ಲವನ್ನೂ ರ್ಯಾಪರ್ನಿಂದ ಮುಚ್ಚುವುದನ್ನು ನೋಡಬಹುದಾಗಿದೆ.
ಈ ತಮಾಷೆಗೆ ನೆಟ್ಟಿಗರು ಖುಷಿ ಪಟ್ಟರೂ, ಇಂಥದ್ದೊಂದು ತಮಾಷೆ ಮಾಡಲು ಮಾಡಿರುವ ಖರ್ಚು ಹಾಗೂ ತೆಗೆದುಕೊಂಡಿರುವ ಸಮಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಇಷ್ಟೆಲ್ಲಾ ಬೇಕಿತ್ತಾ ಎಂದುಪ್ರಶ್ನಿಸಿದ್ದಾರೆ.