ನೈಟ್ ಲೈಫ್ ಶಾಪಿಂಗ್ ಬಗ್ಗೆ ಕ್ರೇಜ್ ಹೆಚ್ಚಿಸುವ ನಿಟ್ಟಿನಲ್ಲಿ ಲೂಲೂ ಇಂಟರ್ನ್ಯಾಷನಲ್ ಶಾಪಿಂಗ್ ಮಾಲ್ ನೈಟ್ ಲೈಫ್ ಶಾಪಿಂಗ್ ಘೋಷಿಸಿದ್ದು, ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಜನರು ಲೂಲೂ ಔಟ್ಲೆಟ್ಗಳಿಗೆ ನುಗ್ಗುತ್ತಿರುವ ವಿಡಿಯೊ, ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.
ಗುಂಪುಗುಂಪಾಗಿ ಬಂದ ಜನರು ಸಂಗೀತ ಕಾರ್ಯಕ್ರಮ ಮತ್ತು ಮೋಜಿನ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಿಡ್ನೈಟ್ ಶಾಪಿಂಗ್ ಯೋಜನೆಯನ್ನು ಎಂಜಾಯ್ ಮಾಡಿದ್ದಾರೆ. ಲೈವ್ ಬ್ಯಾಂಡ್ಗಳತ್ತಲೂ ಜನರುರ ದೃಷ್ಟಿ ಯನ್ನಿಟ್ಟಿದ್ದು ಕೊನೆಯಲ್ಲಿ ಜನರು ಹೆಚ್ಚಾದಂತೆ ಅವ್ಯವಸ್ಥೆಯು ಹೆಚ್ಚಾಯಿತು.
ಮಾಲ್ನ ಎಸ್ಕಲೇಟರ್ಗಳು ಮತ್ತು ಲಾಬಿಯ ಬಳಿ ಭಾರಿ ರಶ್ ಕಾಣಿಸಿದೆ. ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹೈರಾಣಾಗಿ ಹೋದರು. ದೊಡ್ಡ ಪ್ರಮಾಣದ ರಿಯಾಯಿತಿ ದರಗಳಲ್ಲಿ ವಸ್ತುಗಳನ್ನು ಗ್ರಾಹಕರು ಖರೀದಿ ಮಾಡುವುದೂ ಸಹ ವಿಡಿಯೋಗಳಲ್ಲಿ ಕಾಣಬಹುದು.