alex Certify ತಂದೆಯ ಬರ್ತ್‌ಡೇಗಾಗಿ ಕೇಕ್‌ ಮಾಡಿಕೊಟ್ಟ ಪುಟ್ಟ ಬಾಲಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯ ಬರ್ತ್‌ಡೇಗಾಗಿ ಕೇಕ್‌ ಮಾಡಿಕೊಟ್ಟ ಪುಟ್ಟ ಬಾಲಕಿ…!

ಮನೆಯಲ್ಲಿ ಮಕ್ಕಳು ಯಾವ ಕೀಟಲೆ ಮಾಡಿದರೂ, ಏನೇ ತುಂಟಾಟ ಆಡಿದರೂ ಚೆಂದ. ಅದರಲ್ಲೂ, ಮುದ್ದಿನ ನಾಲ್ಕು ವರ್ಷದ ಮಗಳು ಬರ್ತ್‌ಡೇಗಾಗಿ ಕೇಕ್‌ ತಯಾರಿಸಿದರೆ ಒಬ್ಬ ತಂದೆಯಾದವನಿಗೆ ತುಂಬ ಖುಷಿಯಾಗುತ್ತದೆ. ಇದೇ ರೀತಿಯ ಖುಷಿಯನ್ನು ವ್ಯಕ್ತಿಯೊಬ್ಬರು ಅನುಭವಿಸಿದ್ದು, ನಾಲ್ಕು ವರ್ಷದ ಮಗಳು ಕೇಕ್‌ ತಯಾರಿಸಿರುವ ವಿಡಿಯೋ ಈಗ ವೈರಲ್‌ ಆಗಿದೆ.

ಜೋ ಎಂಬ ಮಹಿಳೆಯು ತನ್ನ ಪತಿಯ ಜನ್ಮದಿನ ಹತ್ತಿರ ಬಂದ ಕಾರಣ ಮಗಳನ್ನು ಕರೆದ ಅವರು, ’ನಿನ್ನ ತಂದೆಯ ಜನ್ಮದಿನಕ್ಕೆ ಏನು ಉಡುಗೊರೆ ಕೊಡುತ್ತೀಯಾ ?’ ಎಂದು ಕೇಳಿದ್ದಾರೆ.

ಇದಕ್ಕೆ ತಕ್ಷಣ ಉತ್ತರಿಸಿದ ನಾಲ್ಕು ವರ್ಷದ ‘ಎಲ್ಲಿ’ ಎಂಬ ಬಾಲಕಿಯು, ’ವ್ಯಾಕ್ಯೂಮ್‌ ಕೇಕ್‌’ ತಯಾರಿಸಿ, ಉಡುಗೊರೆ ಕೊಡುತ್ತೇನೆ ಎಂದು ಹೇಳಿದ್ದಾಳೆ. ಇದಕ್ಕೆ ತಾಯಿಯೂ ಸಮ್ಮತಿಸಿದ್ದು, ಕೇಕ್‌ ತಯಾರಿಸಲು ನೆರವಾಗಿದ್ದಾರೆ.

ವ್ಯಾಕ್ಯೂಮ್‌ ಜತೆ ಆಟವಾಡುವುದೇ ಬಾಲಕಿಗೆ ಅಭ್ಯಾಸವಾಗಿದ್ದು, ಅದೇ ರೀತಿ, ಕೇಕ್‌ಗೆ ವ್ಯಾಕ್ಯೂಮ್‌ ಟಾಪರ್‌ ಬಳಸಿ ಕೇಕ್‌ ತಯಾರಿಸಿದ್ದಾಳೆ. ತಂದೆಯ ಬರ್ತ್‌ಡೇಗೆ ಸಾಮಾನ್ಯ ಕೇಕ್‌ ತಯಾರಿಸಲು ಇಚ್ಛಿಸದ ಎಲ್ಲಿ, ವ್ಯಾಕ್ಯೂಮ್‌ ಕೇಕ್‌ ತಯಾರಿಸುತ್ತೇನೆ ಎಂದಿದ್ದಾಳೆ. ಇದಕ್ಕೆ ತಾಯಿ ಸಮ್ಮತಿಸಿದ್ದು, ಮಾರುಕಟ್ಟೆಯಿಂದ ಎಲ್ಲ ಸಾಮಗ್ರಿ ತಂದು ಕೊಟ್ಟಿದ್ದಾರೆ.

ಬಾಲಕಿಯು ಆಸ್ಥೆಯಿಂದ ಕೇಕ್‌ ತಯಾರಿಸಿದ್ದನ್ನು ವಿಡಿಯೋ ಮಾಡಿದ್ದು, ’ದಿ ಕೇಕಿಂಗ್‌ ಗರ್ಲ್‌’ ಎಂಬ ಖಾತೆಯಿಂದ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಆಗಿದೆ. ಮಗಳು ತಯಾರಿಸಿದ ಕೇಕ್‌ ತಿಂದು ತಂದೆಯು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, 86 ಸಾವಿರಕ್ಕೂ ಹೆಚ್ಚಿನ ಲೈಕ್‌ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...