ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ರಸ್ತೆ ದಾಟುವ ಸಮಯದಲ್ಲಿ ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ಹೆದ್ದಾರಿ ಸಿಗ್ನಲ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
11 ಸೆಕೆಂಡುಗಳ ವಿಡಿಯೋವನ್ನು ಮಿಲಿಂದ್ ಪರಿವಾಕಂ ಎಂಬ ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಧಿಕಾರಿಗಳು ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಚಾಲಕರನ್ನು ನಿಲ್ಲಿಸಿ ಶಾಂತವಾಗಿರಲು ಚಿಹ್ನೆಗಳನ್ನು ನೀಡುತ್ತಾರೆ. ಆ ಸಮಯದಲ್ಲಿ ವಯಸ್ಕ ಹುಲಿಯೊಂದು ಮರಗಳ ಹಿಂದಿನಿಂದ ಮೆಲ್ಲನೆ ಬರುವುದನ್ನು ನೋಡಬಹುದು.
ರಸ್ತೆ ದಾಟಲು ಅತ್ತಿತ್ತ ನೋಡಿ ನಿಧಾನವಾಗಿ ಹೆಜ್ಜೆ ಹಾಕಿತು. ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತಿದ್ದರು. ಹುಲಿಯ ಮರಿ ಕೊನೆಗೆ ತಾಯಿಯನ್ನು ಹಿಂಬಾಲಿಸಿತು.