alex Certify ಇತಿಹಾಸದಲ್ಲೇ ಮೊದಲ ಬಾರಿಗೆ ವಾಷಿಂಗ್ಟನ್​ನಲ್ಲಿ ಪ್ರತ್ಯಕ್ಷವಾದ ಅಪರೂಪದ ಫ್ಲೆಮಿಂಗೋಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇತಿಹಾಸದಲ್ಲೇ ಮೊದಲ ಬಾರಿಗೆ ವಾಷಿಂಗ್ಟನ್​ನಲ್ಲಿ ಪ್ರತ್ಯಕ್ಷವಾದ ಅಪರೂಪದ ಫ್ಲೆಮಿಂಗೋಗಳು….!

ವಿಸ್ಕಾನ್ಸಿನ್​​ ಪೋರ್ಟ್​ ವಾಷಿಂಗ್ಟನ್​​ನಲ್ಲಿ ಅನಿರೀಕ್ಷಿತವಾಗಿ ಐದು ಫ್ಲೆಮಿಂಗೋಗಳು ಕಾಣಿಸಿಕೊಂಡಿವೆ. ಇವು ಮಿಲ್ವಾಕೀಯಿಂದ ಉತ್ತರಕ್ಕೆ 25 ಮೈಲಿಗಳಷ್ಟು ದೂರದಲ್ಲಿದೆ.

ಮಿಚಿಗನ್ ಸರೋವರದ ತೀರದಲ್ಲಿ ಐದು ಫ್ಲೆಮಿಂಗೋಗಳು ಅಲೆದಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಂದಹಾಗೆ ಇದೇ ಮೊಟ್ಟ ಮೊದಲ ಬಾರಿಗೆ ಅಮೆರಿಕ ಫ್ಲೆಮಿಂಗೋಗಳು ವಿಸ್ಕಾನ್ಸಿನ್​ನಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದೆ.

ಶುಕ್ರವಾರದಂದು ಐದು ಫ್ಲೆಮಿಂಗೋಗಳು ಕಾಣಿಸಿಕೊಂಡಿವೆ. ಉಷ್ಣವಲಯದಲ್ಲಿ ಕಾಣಸಿಗುವ ಈ ಪಕ್ಷಿಗಳು ತಮ್ಮ ಸಾಮಾನ್ಯ ಆವಾಸ ಸ್ಥಾನದಿಂದ ದೂರದಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಮೂರು ಫ್ಲೆಮಿಂಗೋಗಳು ವಯಸ್ಕ ಪಕ್ಷಿಗಳಾಗಿವೆ.

ಇವುಗಳು ಗುಲಾಬಿ ಬಣ್ಣದ ಗರಿಗಳನ್ನು ಹೊಂದಿವೆ. ಉಳಿದ ಎರಡು ಪಕ್ಷಿಗಳು ಬಾಲ್ಯಾವಸ್ಥೆಯಲ್ಲಿದ್ದು ಬೂದು ಬಣ್ಣದ ಗರಿಯನ್ನು ಹೊಂದಿವೆ.

ಈ ಪಕ್ಷಿಗಳು ಈ ರೀತಿ ಕಾಣಿಸಿಕೊಂಡಿರೋದು ನಿಜಕ್ಕೂ ನಂಬಲಾರದ ವಿಚಾರ ಎಂದು ಪಕ್ಷಿ ವೀಕ್ಷಕ ಹಾಗೂ ಫೋಟೋಗ್ರಾಫರ್​ ಜಿಮ್​ ಎಡೆಲ್ಹುಬರ್​​​ ಹೇಳಿದ್ದಾರೆ.

ಇದರ ಜೊತೆಯಲ್ಲಿ ಫ್ಲೆಮಿಂಗೋಗಳು ಇಂಡಿಯಾನಾ, ಕೆಂಟುಕಿ, ಓಹಿಯೋ ಹಾಗೂ ಪೆನ್ಸಿಲ್ವೇನಿಯಾದಲ್ಲಿ ಸಹ ಕಾಣಿಸಿಕೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

— AccuWeather (@accuweather) September 23, 2023

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...