alex Certify ಟ್ರಿಗರ್‌ಫಿಶ್ ದಾಳಿಗೆ ಒಳಗಾದ ಸ್ಕೂಬಾ ಡೈವರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಿಗರ್‌ಫಿಶ್ ದಾಳಿಗೆ ಒಳಗಾದ ಸ್ಕೂಬಾ ಡೈವರ್‌

ಟ್ರಿಗರ್ ಫಿಶ್‌ ಒಂದು ಸ್ಕೂಬಾ ಡೈವರ್‌ನ ಕಾಲನ್ನು ಕಚ್ಚುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾನವ ತರಹದ ಹಲ್ಲುಗಳನ್ನು ಹೊಂದಿರುವ ಮೀನುಗಳು ಈಜುತ್ತಿರುವವನ ಕಾಲಿಗೆ ಕಚ್ಚುವುದನ್ನು ನೋಡಬಹುದಾಗಿದೆ.

ಡೈಲಿ ಸ್ಟಾರ್‌ನ ವರದಿಯ ಪ್ರಕಾರ, ಸ್ಕೂಬಾ ಡೈವರ್ ಅನ್ನು ಅಲೆಕ್ಸ್ ಪಿಕುಲ್ ಎಂದು ಗುರುತಿಸಲಾಗಿದೆ. ಈತ ಜಲಚರ ದಾಳಿಗೆ ಒಳಗಾದ ಎಂಟು ಡೈವರ್‌ಗಳಲ್ಲಿ ಒಬ್ಬನಾಗಿದ್ದಾನೆ.

ವರದಿಯ ಪ್ರಕಾರ ಈ ಡೈವರ್‌ ಹಾದಿಯನ್ನು ಬದಲಿಸಿದಾಗ ಬಲವಾದ ಪ್ರವಾಹವಾಗಿತ್ತು. ಕೆಲವೊಂದು ಸಂಶೋಧನೆ ಮಾಡಲು ಉದ್ದೇಶಪೂರ್ವಕವಾಗಿ ಮೊಟ್ಟೆಗಳ ಗೂಡಿನ ಬಳಿ ಹೋಗಿದ್ದ. ಆಗ ಟ್ರಿಗರ್‌ಫಿಶ್‌ ಹಠಾತ್‌ ದಾಳಿ ಮಾಡಿದೆ. ಆದಾಗ್ಯೂ ದಾಳಿಯ ಹಿಂದಿನ ಕಾರಣವು ಅಸ್ಪಷ್ಟವಾಗಿಯೇ ಉಳಿದಿದೆ ಎನ್ನಲಾಗಿದೆ.

ಮೀನು ಕಚ್ಚಿದಾಗ ಡೈವರ್‌ ಕಿರುಚುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದು, ಇಂಥ ಹುಚ್ಚು ಸಾಹಸಕ್ಕೆ ಕೈಹಾಕದಿರುವುದು ಒಳ್ಳೆಯದು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...