alex Certify ಮದುವೆ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ಮಾಜಿ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ಮಾಜಿ ಸಿಎಂ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರ ಮಗ ಒಮರ್​ ಜಮ್ಮುವಿನಲ್ಲಿ ನಡೆದ ತಮ್ಮ ಪಕ್ಷದ ಸಹೋದ್ಯೋಗಿಯ ಮಗನ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಸ್ಟೆಪ್​ ಹಾಕಿರುವ ವಿಡಿಯೋ ವೈರಲ್​ ಆಗಿದೆ.

ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ, ಜನಪ್ರಿಯ ಗೀತೆ ದಾಮಾ ದಮ್​ ಮಸ್ತ್​ ಖಲಂದರ್​ನ ಬೀಟ್​ಗಳಿಗೆ ಅವರಿಬ್ಬರೂ ಸ್ಟೆಪ್​ ಹಾಕುವುದನ್ನು ಕಾಣಬಹುದು. ತಂದೆ ಮತ್ತು ಮಗ ಹಾಡಿಕೆ ತಕ್ಕಂತೆ ಹೊಂದಾಣಿಕೆಯ ಹೆಜ್ಜೆ ಹಾಕುತ್ತಾರೆ.

ಫಾರೂಕ್​ ಅಬ್ದುಲ್ಲಾ ಅವರ ನೃತ್ಯದ ವಿಡಿಯೋ ವೈರಲ್​ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಚಂಡೀಗಢದಲ್ಲಿ ನಡೆದ ಪಂಜಾಬ್​ ಮಾಜಿ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಅವರ ಮೊಮ್ಮಗಳ ವಿವಾಹ ಸಮಾರಂಭದಲ್ಲಿ ಅವರು ನೃತ್ಯ ಮಾಡಿದ ಕ್ಲಿಪ್​ ವೈರಲ್​ ಆಗಿತ್ತು.

ಈ ವಯಸ್ಸಿನಲ್ಲೂ ಹಿರಿಯ ನಾಯಕರ ಉತ್ಸಾಹ ಕಂಡು ನೆಟ್ಟಿಗರು ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...