
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಮಗ ಒಮರ್ ಜಮ್ಮುವಿನಲ್ಲಿ ನಡೆದ ತಮ್ಮ ಪಕ್ಷದ ಸಹೋದ್ಯೋಗಿಯ ಮಗನ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಸ್ಟೆಪ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಜನಪ್ರಿಯ ಗೀತೆ ದಾಮಾ ದಮ್ ಮಸ್ತ್ ಖಲಂದರ್ನ ಬೀಟ್ಗಳಿಗೆ ಅವರಿಬ್ಬರೂ ಸ್ಟೆಪ್ ಹಾಕುವುದನ್ನು ಕಾಣಬಹುದು. ತಂದೆ ಮತ್ತು ಮಗ ಹಾಡಿಕೆ ತಕ್ಕಂತೆ ಹೊಂದಾಣಿಕೆಯ ಹೆಜ್ಜೆ ಹಾಕುತ್ತಾರೆ.
ಫಾರೂಕ್ ಅಬ್ದುಲ್ಲಾ ಅವರ ನೃತ್ಯದ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಚಂಡೀಗಢದಲ್ಲಿ ನಡೆದ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮೊಮ್ಮಗಳ ವಿವಾಹ ಸಮಾರಂಭದಲ್ಲಿ ಅವರು ನೃತ್ಯ ಮಾಡಿದ ಕ್ಲಿಪ್ ವೈರಲ್ ಆಗಿತ್ತು.
ಈ ವಯಸ್ಸಿನಲ್ಲೂ ಹಿರಿಯ ನಾಯಕರ ಉತ್ಸಾಹ ಕಂಡು ನೆಟ್ಟಿಗರು ಖುಷಿಪಟ್ಟಿದ್ದಾರೆ.