alex Certify ರೂಬಿಕ್ಸ್​ ಕ್ಯೂಬ್​ನಿಂದ ದಿನೇಶ್​ ಕಾರ್ತಿಕ್ ಭಾವಚಿತ್ರವನ್ನು ರಚಿಸಿದ ಅಭಿಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೂಬಿಕ್ಸ್​ ಕ್ಯೂಬ್​ನಿಂದ ದಿನೇಶ್​ ಕಾರ್ತಿಕ್ ಭಾವಚಿತ್ರವನ್ನು ರಚಿಸಿದ ಅಭಿಮಾನಿ

ಈ ಬಾರಿಯ ಐಪಿಎಲ್​ನಿಂದ ದಿನೇಶ್​ ಕಾರ್ತಿಕ್ ಬಗ್ಗೆ ಹೊಸ ಕ್ರೇಜ್​ ಸೃಷ್ಟಿಯಾಗಿದೆ. ಇನ್ನಿಂಗ್ಸ್​ ಕೊನೆಯಲ್ಲಿ ಅವರ ಹೊಡಿಬಡಿಯ ಫಿನಿಶಿಂಗ್​ ಟಚ್​ ಕ್ರಿಕೆಟ್​ ಪ್ರೇಮಿಗಳಲ್ಲಿ ಅಭಿಮಾನ ಹೆಚ್ಚಿಸಿದೆ. ಅಷ್ಟೇ ಅಲ್ಲದೇ ದಿನೇಶ್​ ಕಾರ್ತಿಕ್ ಇಂಡಿಯಾ ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಮುನ್ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಅವರ ಅಭಿಮಾನಿಯೊಬ್ಬ ರೂಬಿಕ್ಸ್​ ಕ್ಯೂಬ್​ ಬಳಸಿ ಅವರ ಭಾವಚಿತ್ರವನ್ನು ಸಿದ್ಧಪಡಿಸಿ ಸಂಭ್ರಮಿಸಿದ್ದಾರೆ. ಬೃಹತ್​ ಭಾವಚಿತ್ರವು ಸ್ವತಃ ಕ್ರಿಕೆಟಿಗರು ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘನೆ ಗಳಿಸಿದೆ.

ಜುಲೈ 1 ರಂದು ಡಬಿರ್ಶೈರ್​ ವಿರುದ್ಧದ ಅಭ್ಯಾಸ ಟಿ20 ಪಂದ್ಯದಲ್ಲಿ ವಿಕೆಟ್​ ಕೀಪರ್​ಬ್ಯಾಟ್ಸ್​ಮನ್​ ಕಾರ್ತಿಕ್ ಮೊದಲ ಬಾರಿಗೆ ಟೀಮ್​ ಇಂಡಿಯಾವನ್ನು ಮುನ್ನಡೆಸಿದರು. ಅವರನ್ನು ಅಭಿನಂದಿಸಲು, ಮೊಸಾಯಿಕ್​ ಕಲಾವಿದ ಮತ್ತು ಸ್ಪೀಡ್​ಕ್ಯೂಬರ್​ ಪೃತ್ವೀಶ್​ 600 ರೂಬಿಕ್ಸ್​ ಬಳಸಿ ಕ್ರಿಕೆಟಿಗನ ಭಾವಚಿತ್ರವನ್ನು ರಚಿಸಿದ್ದಾರೆ. ಭಾವಚಿತ್ರವನ್ನು ರಚಿಸುತ್ತಿರುವ ವೀಡಿಯೊವನ್ನು ಪೃಥ್ವೀಶ್​ ಸೋಮವಾರ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ 86,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, 18,000ಕ್ಕೂ ಹೆಚ್ಚು ಲೈಕ್​ ಪಡೆದಿದೆ. ದಿನೇಶ್​ ಕಾತಿರ್ಕ್​ ಅಭಿಮಾನಿಗಳು ಕಾಮೆಂಟ್​ ವಿಭಾಗವನ್ನು ಪ್ರಶಂಸೆ ಮತ್ತು ಶುಭಾಶಯಗಳೊಂದಿಗೆ ತುಂಬಿಸಿಬಿಟ್ಟಿದ್ದಾರೆ. ಕಾರ್ತಿಕ್ ಕೂಡ ಪೋಸ್ಟ್​‌ಗೆ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

2004 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಕಾರ್ತಿಕ್ 26 ಟೆಸ್ಟ್​, 94 ಸೀಮಿತ ಓವರ್​ ಪಂದ್ಯ ಮತ್ತು 39 ಟಿ20 ಪಂದ್ಯಗಳನ್ನು ಆಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...