ಆನೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಅಲ್ಲದೇ ಅವುಗಳ ಬಗ್ಗೆ ಸಾಕಷ್ಟು ವಿಚಾರಗಳನ್ನೂ ತಿಳಿದುಕೊಂಡಿರ್ತೇವೆ. ಆನೆಗಳು ಮನುಷ್ಯನ ಉತ್ತಮ ಸ್ನೇಹಿತರು, ದಯಾಗುಣ ಹೊಂದಿರುವ ಪ್ರಾಣಿ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆನೆಗಳ ಹಿಂಡಿನ ವಿಡಿಯೋವೊಂದು ವೈರಲ್ ಆಗಿದ್ದು ಆನೆಯ ಉತ್ತಮ ಬುದ್ಧಿಯ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಡಿಯೋದಲ್ಲಿ ಮೂರು ಆನೆಗಳು ಇದ್ದಾವೆ. ಇದರಲ್ಲಿ ಒಂದು ಆನೆ ಆಹಾರವನ್ನ ಸೇವಿಸುತ್ತಿದ್ದರೆ, ಹಿಂದೆ ಇದ್ದ ವಯಸ್ಸಾದ ಆನೆಗೆ ದೃಷ್ಟಿದೋಷ ಇದೆ. ಈ ಕುರುಡು ಆನೆಯನ್ನ ಅದರ ಪಾಡಿಗೆ ಹಾಗೆಯೇ ಬಿಡದ ಮರಿಯಾನೆಯೊಂದು ಅದನ್ನ ಆಹಾರ ಸೇವಿಸುವ ಸ್ಥಳಕ್ಕೆ ಕರೆದುಕೊಂಡು ಬಂದಿದೆ.
ಹಿಂಬದಿ ಕಾಲಿನಲ್ಲಿ ಮರಿಯಾನೆ ನಡೆಯುತ್ತಿದ್ದರೆ ಅದರ ಹೆಜ್ಜೆ ಸಪ್ಪಳವನ್ನ ಕೇಳುತ್ತಾ ಕುರುಡು ಆನೆ ಕೂಡ ಹೆಜ್ಜೆ ಹಾಕಿದೆ. ಎಲಿಫಂಟ್ ನೇಚರ್ ಪಾರ್ಕ್ನಲ್ಲಿ ತೆಗೆದ ಈ ವಿಡಿಯೋ ಸಖತ್ ವೈರಲ್ ಆಗಿದೆ.
https://www.instagram.com/p/CRO6SMOqCpC/?utm_source=ig_web_copy_link