
ಪರಿಸರ ಹವಾಮಾನ ಬದಲಾವಣೆ ಮತ್ತು ತಮಿಳುನಾಡಿನ ಅರಣ್ಯಗಳ ಪ್ರಧಾನ ಕಾರ್ಯದರ್ಶಿಯಾಗಿರುವ ಸುಪ್ರಿಯಾ ಸಾಹು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕ್ರೋಶಗೊಂಡ ಆನೆಯು ಬಸ್ ಕಡೆ ನುಗ್ಗಿದ್ದು ವಿಂಡ್ಶೀಲ್ಡ್ನ್ನು ಮುರಿದು ಹಾಕಿದೆ.
ವಿಡಿಯೋವನ್ನು ಬಸ್ನ ಒಳಗಡೆಯಿಂದ ಚಿತ್ರೀಕರಿಸಲಾಗಿದೆ. ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಚಾಲಕ ಬಸ್ನ್ನು ರಿವರ್ಸ್ ಮಾಡಲು ಮುಂದಾಗಿದ್ದಾರೆ. ಕೆಲ ಸೆಕೆಂಡ್ಗಳ ಬಳಿಕ ತಮ್ಮ ಸೀಟಿನಿಂದ ಎದ್ದು ನಿಂತ ಚಾಲಕ ಆನೆಯ ಲಕ್ಷ್ಯವನ್ನು ಸೆಳೆದಿದ್ದಾರೆ. ಆ ಸಮಯದಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಬಸ್ನಿಂದ ಇಳಿದಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ 70 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ. ನೆಟ್ಟಿಗರು ಚಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.