alex Certify ‘ಸ್ಮಾಲ್ ಟೌನ್ ಗರ್ಲ್’ ಹಾಡಿಗೆ ಇಟಲಿಯಲ್ಲಿ ಯುವಕರ ಸ್ಟೆಪ್​: ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸ್ಮಾಲ್ ಟೌನ್ ಗರ್ಲ್’ ಹಾಡಿಗೆ ಇಟಲಿಯಲ್ಲಿ ಯುವಕರ ಸ್ಟೆಪ್​: ನೆಟ್ಟಿಗರು ಫಿದಾ

2008 ರಲ್ಲಿ ಬಿಡುಗಡೆಯಾದ ರಣಬೀರ್ ಕಪೂರ್, ಬಿಪಾಶಾ ಬಸು, ದೀಪಿಕಾ ಪಡುಕೋಣೆ ಮತ್ತು ಮಿನಿಶಾ ಲಂಬಾ ಅಭಿನಯದ ‘ಬಚ್ನಾ ಏ ಹಸೀನೋ’ ನಮಗೆಲ್ಲರಿಗೂ ನೆನಪಿದೆ. ಚಿತ್ರದ ಅನೇಕ ಹಾಡುಗಳು ನಮ್ಮನ್ನು ಸೆಳೆದಿವೆ. ಈಗ, ಇಬ್ಬರು ಪುರುಷರು ಚಲನಚಿತ್ರದ ಹಿಟ್ ಹಾಡುಗಳಲ್ಲಿ ಒಂದಾದ ‘ಸ್ಮಾಲ್ ಟೌನ್ ಗರ್ಲ್’ ಅನ್ನು ಮರು ಸೃಷ್ಟಿಸಿದ್ದಾರೆ, ಬಿಪಾಶಾ ಬಸು ಮತ್ತು ರಣಬೀರ್ ಕಪೂರ್ ಮಾಡಿದ ಡಾನ್ಸ್​ಗೆ ಇಟಲಿಯ ರೋಮ್‌ನಲ್ಲಿ ಅದೇ ಸ್ಥಳದಲ್ಲಿ ಸ್ಟೆಪ್​ ಹಾಕಿದ್ದಾರೆ.

ಈ ವಿಡಿಯೋವನ್ನು ಸೌರವ್ ಗಾರ್ಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಬಳಕೆದಾರರು ತಮ್ಮ ಸ್ನೇಹಿತ ಮಾನವ್ ಜೊತೆಗೆ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು.

ಬಿಪಾಶಾ ಪಾತ್ರದಲ್ಲಿ ಮಾನವ್ ಅದ್ಭುತವಾಗಿ ನಟಿಸಿದ್ದರೆ, ಸೌರವ್ ಅವರು ರಣಬೀರ್ ಕಪೂರ್ ಅವರ ಹೆಜ್ಜೆಗಳನ್ನು ಅನುಕರಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋವನ್ನು ಇದಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಪಾಶಾ ಬಸು ಜಾಗದಲ್ಲಿ ಹುಡುಗಿಯೇ ನೃತ್ಯ ಮಾಡಿದ್ದರೆ ಇನ್ನೂ ಚೆನ್ನಾಗಿತ್ತು ಎಂದು ಹಲವರು ಹೇಳಿದ್ದರೆ, ಮಾನವ್​ ಅವರು ಬಿಪಾಶಾರಂತೆ ಸುಂದರವಾಗಿ ನರ್ತಿಸಿದ್ದಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...