ಡ್ರ್ಯಾಗ್ ಆರ್ಟಿಸ್ಟ್ ಪತ್ರುಣಿ ಅವರು ಹೈದ್ರಾಬಾದ್ನಲ್ಲಿ ಬಾಲಕಿ ಜೊತೆಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯ ವೇಷ ತೊಟ್ಟ ಕಲಾವಿದ ಹಾಡಿನ ರಿದಂಗೆ ತಕ್ಕಂತೆ ಹೆಜ್ಜೆಹಾಕಿ ಮಗುವಿನ ಕುಣಿತವನ್ನು ಪ್ರೋತ್ಸಾಹಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲಿದ್ದ ಪೋಷಕರು, ಸಾರ್ವಜನಿಕರು ವಿಡಿಯೋ ಮಾಡಿಕೊಳ್ಳುತ್ತಿರುವುದೂ ಸಹ ಕಾಣಿಸುತ್ತದೆ.
ಡ್ರ್ಯಾಗ್ ಶೋಗಳಿಂದ ಮಕ್ಕಳನ್ನು ದೂರ ಇಡುತ್ತಾರೆ. ಆದರೆ ಮಕ್ಕಳು ಡ್ರ್ಯಾಗ್ ಕ್ವೀನ್ಗಳ ಮೇಲೆ ಪ್ರೀತಿ ತೋರಿಸುತ್ತಾರೆ ಎಂದು ಪತ್ರುನಿ ತಮ್ಮ ಶೀಷಿರ್ಕೆಯಲ್ಲಿ ಬರೆದುಕೊಂಡಿದ್ದಾರೆ.
ಜಾನಪದ ಗಾಯಕ, ಡ್ಯಾನ್ಸರ್ ಕೂಡ ಆಗಿರುವ ಪತ್ರುನಿ ತಮ್ಮ ಕಲಾ ಪ್ರಕಾರವನ್ನು ಮತ್ತಷ್ಟು ಉತ್ತೇಜಿಸಲು ಹಲವಾರು ಪ್ರದರ್ಶನ ಮಾಡಿದ್ದಾರೆ. ಅವರು ಪಡೆಯುವ ಎಲ್ಲಾ ನಕಾರಾತ್ಮಕ ಕಾಮೆಂಟ್ಗಳ ಬಗ್ಗೆಯೂ ಅನುಭವ ಹಂಚಿಕೊಂಡಿದ್ದಾರೆ.