ಕೃಷಿ ಅಷ್ಟೊಂದು ಸುಲಭದ ಕೆಲಸವಲ್ಲ. ಅನುಭವ, ತಾಳ್ಮೆ, ಹೆಚ್ಚು ಶ್ರಮ ಬೇಡುವ ಈ ಕೆಲಸವನ್ನು ಎಲ್ಲರಿಂದಲೂ ಮಾಡಲು ಸಾಧ್ಯವಾಗುವುದಿಲ್ಲ. ಇತರರ ಸಹಾಯವಿದ್ದರೆ ಈ ಕೆಲಸವು ಸಹ ಸುಲಭವಾಗುತ್ತದೆ ಕೂಡ. ಇದೀಗ ನಾಯಿಯೊಂದು ಕೃಷಿಯಲ್ಲಿ ಮಾಲೀಕನಿಗೆ ಸಹಾಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ನೆಟ್ಟಿಗರ ಮನಗೆದ್ದಿದೆ.
ಇಬ್ಬರು ವ್ಯಕ್ತಿಗಳು ಹೊಲದಲ್ಲಿ ಆಲೂಗಡ್ಡೆ ಕೃಷಿ ಮಾಡುತ್ತಿದ್ದರು. ಆಗ ನಾಯಿಯು ಕೂಡ ಅವರ ಸಹಾಯಕ್ಕೆ ಬಂದಿದೆ. ಆಲೂಗಡ್ಡೆ ಹಾಕಲು ಹೊಲವನ್ನು ಸಜ್ಜುಗೊಳಿಸಿ ಹೊಂಡ ತೋಡಲಾಗಿತ್ತು. ಒಬ್ಬ ವ್ಯಕ್ತಿ ಆಲೂಗಡ್ಡೆ ತುಂಬಿದ ಕ್ರೇನ್ ಅನ್ನು ಹಿಡಿದುಕೊಂಡು ನಿಂತಿದ್ದರೆ, ಮತ್ತೊಬ್ಬ ಹೊಂಡದೊಳಗೆ ಆಲೂಗಡ್ಡೆ ಇಡುತ್ತಿದ್ದಂತೆ ತಕ್ಷಣವೇ ನಾಯಿ ಮಣ್ಣನ್ನು ಹೊಂಡದೊಳಗೆ ತಳ್ಳುವ ಮೂಲಕ ಕೃಷಿ ಕೆಲಸಕ್ಕೆ ಸಹಾಯ ಮಾಡಿದೆ.
ಉತ್ತರ ಪ್ರದೇಶದ ಈ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳೋ ಭೂಮಿಗೆ ಪಾಕಿಸ್ತಾನಿಗಳೇ ಮಾಲೀಕರು….!
ಈ ಕುರಿತು ರೆಡ್ಡಿಟ್ ವರದಿ ಮಾಡಿದ್ದು, ನಾಯಿಯ ಈ ಸಹಾಯ ಗುಣಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ನಾಲ್ಕುದಿನಗಳ ಹಿಂದೆ ವಿಡಿಯೊ ಅಪ್ ಲೋಡ್ ಆಗಿದ್ದು, 48 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.