alex Certify ʼಪಠಾಣ್ʼ​ ವೇಷಧಾರಿಯಾಗಿ ಮಿಂಚಿದ ಅಬ್ಬರದ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಠಾಣ್ʼ​ ವೇಷಧಾರಿಯಾಗಿ ಮಿಂಚಿದ ಅಬ್ಬರದ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್

ಪಠಾಣ್​ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನಿಪ್ರಿಯರು ಪಠಾಣ್​ ವೇಷ ತೊಟ್ಟು, ಅದರ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ಕುಣಿದಾಡುತ್ತಿದ್ದರೆ, ಅತ್ತ, ಆಸೀಸ್‌ನ ಸ್ಟಾರ್ ಆಟಗಾರ ಅಬ್ಬರದ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್ ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಆಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ.

ಪಠಾಣ್​ ವೇಷ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ‌ ವಿಡಿಯೋ ಪೋಸ್ಟ್ ಮಾಡಿರುವ ಅವರು, ಅಭಿಮಾನಿಗಳನ್ನು ರಂಜಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್​ ಮಾಡಿಕೊಂಡಿರುವ ಅವರು, ‘ವಾಹ್ ವಾಟ್ ಎ ಫಿಲಂʼ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗಿದ್ದು, ಅಭಿಮಾನಿಗಳ ಕಮೆಂಟ್ಸ್​ನಿಂದ ತುಂಬಿ ಹೋಗಿದೆ.

ಅಂದಹಾಗೆ ಡೇವಿಡ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಕೋವಿಡ್​ನ ಲಾಕ್‌ಡೌನ್ ಸಮಯದಲ್ಲಿಯೂ ಅವರು ಬಹಳ ಸಕ್ರಿಯರಾಗಿದ್ದರು. ತೆಲುಗಿನ ಸೂಪರ್ ಹಿಟ್ ಹಾಡುಗಳು ಮತ್ತು ಮಾಸ್ ಸ್ಟೆಪ್ಸ್​ಗಳನ್ನು ಅನುಕರಿಸಿ ವಿಡಿಯೋ ಶೇರ್ ಮಾಡಿದ್ದರು. ಅಲ್ಲು ಅರ್ಜುನ್ ಅವರ ʼಪುಷ್ಪʼ ಚಿತ್ರದಲ್ಲಿ ಡೈಲಾಗ್ ಮತ್ತು ಹಾಡುಗಳೊಂದಿಗೆ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...