
ಪಠಾಣ್ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನಿಪ್ರಿಯರು ಪಠಾಣ್ ವೇಷ ತೊಟ್ಟು, ಅದರ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಕುಣಿದಾಡುತ್ತಿದ್ದರೆ, ಅತ್ತ, ಆಸೀಸ್‌ನ ಸ್ಟಾರ್ ಆಟಗಾರ ಅಬ್ಬರದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಆಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ.
ಪಠಾಣ್ ವೇಷ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಅಭಿಮಾನಿಗಳನ್ನು ರಂಜಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಅವರು, ‘ವಾಹ್ ವಾಟ್ ಎ ಫಿಲಂʼ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಅಭಿಮಾನಿಗಳ ಕಮೆಂಟ್ಸ್ನಿಂದ ತುಂಬಿ ಹೋಗಿದೆ.
ಅಂದಹಾಗೆ ಡೇವಿಡ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಕೋವಿಡ್ನ ಲಾಕ್‌ಡೌನ್ ಸಮಯದಲ್ಲಿಯೂ ಅವರು ಬಹಳ ಸಕ್ರಿಯರಾಗಿದ್ದರು. ತೆಲುಗಿನ ಸೂಪರ್ ಹಿಟ್ ಹಾಡುಗಳು ಮತ್ತು ಮಾಸ್ ಸ್ಟೆಪ್ಸ್ಗಳನ್ನು ಅನುಕರಿಸಿ ವಿಡಿಯೋ ಶೇರ್ ಮಾಡಿದ್ದರು. ಅಲ್ಲು ಅರ್ಜುನ್ ಅವರ ʼಪುಷ್ಪʼ ಚಿತ್ರದಲ್ಲಿ ಡೈಲಾಗ್ ಮತ್ತು ಹಾಡುಗಳೊಂದಿಗೆ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
https://youtu.be/UnRZCLW3nJ0