ರಕ್ಷಣಾ ತಂಡ ಮಗುವನ್ನು ಹುಡುಕುತ್ತಿರುವಂತೆಯೇ, ಮಗುವಿನ ಮೃತದೇಹವನ್ನು ಮೊಸಳೆಯೊಂದು ಬೆನ್ನಮೇಲೆ ಹೊತ್ತುತಂದು ರಕ್ಷಣಾ ತಂಡಕ್ಕೆ ನೀಡಿದೆ. ಈ ಅಚ್ಚರಿಯ ಘಟನೆ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದೀಗ ವೈರಲ್ ಆಗಿದೆ.
ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಮೊಸಳೆಯೊಂದು ಬಾಲಕನ ಶವವನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇಂಡೋನೇಷ್ಯಾದ ಪೂರ್ವ ಕಾಲಿಮಂಟನ್ ಪ್ರಾಂತ್ಯದ ಪೂರ್ವ ಬೊರ್ನಿಯೊ ದ್ವೀಪದಲ್ಲಿ ಈ ಘಟನೆ ನಡೆದಿದೆ. ಮೊಸಳೆಯ ಈ ಅಸಾಮಾನ್ಯ ಕೃತ್ಯಕ್ಕೆ ಆ ಪ್ರದೇಶದ ನಿವಾಸಿಗಳು ಸಂಪೂರ್ಣ ಬೆಚ್ಚಿಬಿದ್ದಿದ್ದಾರೆ. ಭಾರತೀಯ ಅರಣ್ಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ನೆಟ್ಟಿಗರು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ. “ಪ್ರಾಣಿಗಳು ಈ ರೀತಿ ಕೆಲಸಗಳನ್ನು ಮಾಡುವುದನ್ನು ನೋಡಿದಾಗ ಪುನರ್ಜನ್ಮವನ್ನು ನಂಬಲೇಬೇಕು ಎನ್ನಿಸುತ್ತದೆ” ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ.