ರೈಲ್ವೆ ಸಂರಣಾ ಪಡೆಯ (ಆರ್ಪಿಎಫ್) ಇಬ್ಬರು ಅಧಿಕಾರಿಗಳು ಇತ್ತೀಚೆಗೆ ಪ್ಲಾಟ್‌ಫಾರ್ಮ್ ಮತ್ತು ಚಲಿಸುವ ರೈಲಿನ ನಡುವಿನ ಸಣ್ಣ ಅಂತರದಲ್ಲಿ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಡಿಯೋ ಕ್ಲಿಪ್ನಲ್ಲಿರುವಂತೆ ನಿಲ್ದಾಣದಲ್ಲಿ ರೈಲು ಚಲಿಸುತ್ತಿರುವುದನ್ನು ತೋರಿಸುತ್ತದೆ, ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಜಾರಿಕೊಂಡು ಪ್ಲಾಟ್‌ಫಾರ್ಮ್ ಮತ್ತು ಟ್ರ್ಯಾಕ್ ಮಧ್ಯೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಇಬ್ಬರು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಅವನನ್ನು ಎಳೆಯಲು ತ್ವರಿತವಾಗಿ ಸ್ಪಂದಿಸುತ್ತಾರೆ. ಈ ಪ್ರಯತ್ನದಲ್ಲಿ ಕೈ ಜೋಡಿಸಲು ಅಲ್ಲಿದ್ದ ಇತರೆ ಪ್ರಯಾಣಿಕರು ಸೇರುತ್ತಾರೆ.
ಸಣ್ಣ ಅಂತರ ಇರುವುದರಿಂದ ಆ ತಪ್ಪಿಸಿಕೊಳ್ಳಲು ಕಷ್ಟವೇ, ರಕ್ಷಣೆ ಕಾರ್ಯವೂ ಸುಲಭವಾಗಿರಲಿಲ್ಲ. ಆದರೆ ಭದ್ರತಾ ಪಡೆಯ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸುತ್ತಾರೆ.
ಇಬ್ಬರು ಆರ್ಪಿಎಫ್ ಅಧಿಕಾರಿಗಳನ್ನು ಎಎಸ್ಐ ಅರುಂಜಿ ಮತ್ತು ಲೇಡಿ ಎಚ್ಸಿ ಪಿಪಿ ಮಿನಿ ಎಂದು ಗುರುತಿಸಲಾಗಿದೆ. ಅಧಿಕಾರಿಯ ಶೌರ್ಯಕ್ಕೆ ಗೌರವ ಸಲ್ಲಿಸಲು ಆರ್ಪಿಎಫ್ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ. ಶೌರ್ಯ ಮತ್ತು ಧೈರ್ಯದ ಮತ್ತೊಂದು ಕಥೆ! ಎಂದು ಆ ಘಟನೆಯ ವಿವರಣೆ ನೀಡಲಾಗಿದೆ.
ಕ್ಲಿಪ್ ಜಾಲತಾಣದಲ್ಲಿ ಕಾಣಿಸಿಕೊಂಡ ತಕ್ಷಣ ಸಾವಿರಾರು ವೀಕ್ಷಣೆ ಕಂಡಿದೆ. ಧೈರ್ಯಶಾಲಿ ಅಧಿಕಾರಿಗಳ ಪ್ರಯತ್ನಕ್ಕೆ ನೆಟ್ಟಿಗರು ಕೃತಜ್ಞತೆ ಸಲ್ಲಿಸಿ ಕಾಮೆಂಟ್ ಮಾಡಿದ್ದಾರೆ.
ವೀಡಿಯೋ ನೋಡಿದರೆ, ಆ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಬಹುತೇಕ ಮಾರಣಾಂತಿಕ ಅಪಘಾತದಿಂದ ಹೊರಬಂದಂತೆ ತೋರುತ್ತಿದೆ.