ಪಾರ್ಟಿಯಲ್ಲಿ ಮೋಜು ಮಾಡುವ ಖುಷಿಯಲ್ಲಿದ್ದ ವ್ಯಕ್ತಿಯನ್ನು ಸಿಂಹವೊಂದು ಅಟ್ಟಿಸಿಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ.
ಈ ವಿಡಿಯೊವನ್ನು ಸುಮಾರು 2 ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಹ್ಯಾಂಡಲ್ ಲಯನ್ಸ್ ಹ್ಯಾಬಿಟಾಟ್ ಹಂಚಿಕೊಂಡಿದೆ. ಲೈಟ್ಗಳಿಂದ ಅಲಂಕರಿಸಲ್ಪಟ್ಟ ಸ್ಥಳ ಪಾರ್ಟಿ ಅಥವಾ ಹಬ್ಬದ ಹಿನ್ನೆಲೆಯ ಕೂಟ ನಡೆಯುತ್ತಿರುವಂತೆ ಕಾಣಿಸುತ್ತದೆ.
ಆ ಸ್ಥಳಕ್ಕೆ ಸಿಂಹಿಣಿಯು ಹೇಗೋ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ, ಜೊತೆಗೆ ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ಸಿಟ್ಟಿನಿಂದ ಅಟ್ಟಿಸಿಕೊಂಡು ಬರುತ್ತದೆ.
ಆತ ತನ್ನನ್ನು ರಕ್ಷಿಸಿಕೊಳ್ಳಲು ಮರ ಏರಿದ್ದಾನೆ. ಆದರೆ, ಹತಾಶ ಪ್ರಯತ್ನದಲ್ಲಿದ್ದಂತೆ ತೋರುವ ಸಿಂಹ ಮರವನ್ನು ಹತ್ತಿಹಿಡಿಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ.
ಆ ಸಿಂಹವು ಆತನನ್ನು ಬಿಡುವ ಮನಃಸ್ಥಿತಿಯಲ್ಲಿರಲಿಲ್ಲ. ಆ ವ್ಯಕ್ತಿ ತನ್ನ ಹಿಡಿತವನ್ನು ಕಳೆದುಕೊಂಡು ಬೀಳುವಂತೆ ಸಿಂಹವನ್ನು ಒದೆಯಲು ಪ್ರಯತ್ನಿಸುತ್ತಾನೆ. ಈ ವಿಡಿಯೋ ನೋಡಿದ ಎಂತವರಿಗೂ ಎದೆ ಝಲ್ ಎನ್ನುವುದು ಖಾತ್ರಿ.
ಮನುಷ್ಯನು ಸಿಂಹವನ್ನು ಒದೆಯಲು ಪ್ರಯತ್ನಿಸುತ್ತಿರುವಾಗ ವೀಡಿಯೊ ಥಟ್ಟನೆ ಕೊನೆಗೊಳ್ಳುತ್ತದೆ. ಕಾಮೆಂಟ್ ವಿಭಾಗದಲ್ಲಿನ ಅನೇಕ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಆ ವ್ಯಕ್ತಿ ಸುರಕ್ಷಿತವಾಗಿದ್ದಾರೆಯೇ ಎಂದು ತಿಳಿಯಲು ಬಯಸಿದ್ದಾರೆ.