alex Certify ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿದ ಸಿಡಿಲು…! ಬೆಚ್ಚಿಬೀಳಿಸುವಂತಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿದ ಸಿಡಿಲು…! ಬೆಚ್ಚಿಬೀಳಿಸುವಂತಿದೆ ವಿಡಿಯೋ

ಐವರು ಕುಟುಂಬಸ್ಥರು ಇದ್ದ ಕಾರಿಗೆ ಏಕಾಏಕಿ ಸಿಡಿಲು ಅಪ್ಪಳಿಸಿದ ಭಯಾನಕ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಮೆರಿಕದ ಕನ್ಸಾನ್​ ಎಂಬಲ್ಲಿ ಜೂನ್​ 25ರಂದು ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್​​​​ ಈ ಕಾರಿನೊಳಗೆ ಇದ್ದ ಒಂದೇ ಮನೆಯ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ವಿಡಿಯೋವನ್ನ ಸೋಶಿಯಲ್​ ಮೀಡಿಯಾದ ಬಹುತೇಕ ಎಲ್ಲಾ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಾ ಇದೆ. 13 ಸೆಕೆಂಡ್​ಗಳ ವಿಡಿಯೋದಲ್ಲಿ ಭಾರೀ ಮಳೆಯಿಂದಾಗಿ ವಾಹನಗಳಿಗೆ ಸಂಚಾರ ನಡೆಸಲು ಕಷ್ಟವಾಗುತ್ತಿರೋದನ್ನ ಗಮನಿಸಬಹುದಾಗಿದೆ. ಕ್ಷಣ ಮಾತ್ರದಲ್ಲಿ ರಸ್ತೆಯಲ್ಲಿದ್ದ ಕಪ್ಪು ಬಣ್ಣದ ಎಸ್​ಯುವಿ ಮೇಲೆ ಸಿಡಿಲು ಬಡಿದಿದೆ.

8 ತಿಂಗಳ ಮಗು, ಮೂರು ವರ್ಷದ ಮಗು ಹಾಗೂ 1.5 ವರ್ಷದ ಮಗು ಸೇರಿದಂತೆ ಒಟ್ಟು 5 ಮಂದಿ ಈ ಕಾರಿನೊಳಗೆ ಇದ್ದರು ಎನ್ನಲಾಗಿದೆ. ಈ ಘಟನೆ ನಡೆಯುತ್ತಿದ್ದಂತೆ ಕಾರಿನೊಳಗಿದ್ದ ಕುಟುಂಬ ಶಾಕ್​ ಆಗಿತ್ತು. ಕೂಡಲೇ ಅವರು ಮಕ್ಕಳು ಹೇಗಿದ್ದಾರೆ ಅನ್ನೋದರ ಬಗ್ಗೆ ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ. ಆದರೆ ಈ ಘಟನೆಯಲ್ಲಿ ಕಾರು ಸಂಪೂರ್ಣ ಜಖಂ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...