ಉತ್ತರ ಪ್ರದೇಶದ ಮುಜಾಫರ್ ನಗರದ ಪಾಣಿಪತ್-ಖತಿಮಾ ಹೆದ್ದಾರಿಯಲ್ಲಿ 100 ವರ್ಷಗಳಷ್ಟು ಹಳೆಯದಾದ ಗಂಗಾ ಕಾಲುವೆಯ ಸೇತುವೆಯನ್ನು ಕೆಡವುವ ಸಂದರ್ಭದಲ್ಲಿ ಭಾರೀ ಅನಾಹುತವನ್ನು ತಪ್ಪಿದೆ.
ಸೆತುವೆ ಕೆಡವುವ ಪ್ರಕ್ರಿಯೆಯಲ್ಲಿ ಬುಲ್ಡೋಜರ್ ಬಹುತೇಕ ಕಾಲುವೆಯಲ್ಲಿ ಮುಳುಗಿದ್ದು, ಈ ಘಟನೆಯ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೆೈರಲ್ ಆಗಿದೆ.
ವೆೈರಲ್ ವೀಡಿಯೊದಲ್ಲಿ, ಬುಲ್ಡೋಜರ್ ನೀರಿನಲ್ಲಿ ಮುಳುಗಲು ಸಿಮೆಂಟ್ ಸೇತುವೆಯಂತೆ ಕಾಣುವ ಮೂಲಕ ಹರಿದು ಹೋಗುವುದನ್ನು ಕಾಣಬಹುದು. ಬುಲ್ಡೋಜರ್ನಲ್ಲಿದ್ದ ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಲ್ಡೋಜರ್ ಸೇತುವೆಯ ಒಂದು ಭಾಗವನ್ನು ಮಾತ್ರ ಜಖಂಗೊಳಿಸುವ ಗುರಿಯನ್ನು ಹೊಂದಿತ್ತು ಆದರೆ ಬಡಿದ ಹೊಡೆತಕ್ಕೆ ಇಡೀ ಸೇತುವೆ ನೀರಿನಲ್ಲಿ ಮುಳುಗಿತು. ಸೇತುವೆ ಮಾತ್ರವಲ್ಲದೆ ಬುಲ್ಡೋಜರ್ ಸಹ ಅದರ ಚಾಲಕರೊಂದಿಗೆ ನೀರಿನಲ್ಲಿ ಕೊಚ್ಚಿಹೋಯಿತು. ಘಟನೆ ಸಂಭವಿಸಿದ ಕೂಡಲೇ ಅಕ್ಕಪಕ್ಕದಲ್ಲಿದ್ದವರು ಒಂದು ಕ್ಷಣ ಗಾಬರಿಯಿಂದ ಪರದಾಡುವಂತಾಯಿತು.
ಮಾಧ್ಯಮ ವರದಿಯ ಪ್ರಕಾರ, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಪಕ್ಕದಲ್ಲಿದ್ದವರು ಬುಲ್ಡೋಜರ್ ಚಾಲಕನ ಪ್ರಾಣ ರಕ್ಷಣೆಗೆ ಮುಂದಾದರು. ವೀಡಿಯೊದ ಅಂತ್ಯದ ವೇಳೆಗೆ ವಾಹನವು ತಲೆಕೆಳಗಾದಂತೆ ಕಂಡುಬಂತು.
ಸಂಪೂರ್ಣವಾಗಿ ನೀರಿನಲ್ಲಿಕೊಚ್ಚಿಹೋದ ಹಳೆಯ ಸೇತುವೆ ಸುಮಾರು 100 ವರ್ಷಗಳಷ್ಟು ಹಳೆಯದು. ಮೇಲ್ನೋಟಕ್ಕೆ, ಕೆಡವುವ ಕೆಲಸವು ಕಾಲುವೆಯ ಉದ್ದಕ್ಕೂ ಪಾಣಿಪತ್-ಖತಿಮಾ ಹೆದ್ದಾರಿಯನ್ನು ವಿಸ್ತರಿಸುವ ಯೋಜನೆಯ ಒಂದು ಭಾಗವಾಗಿತ್ತು.