ಗಿಳಿಗಳು ಮನುಷ್ಯರು ಮಾತನಾಡುವ ಭಾಷೆಗಳಲ್ಲಿ ಕೆಲವು ಪದಗಳನ್ನು ಉಚ್ಚರಿಸುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ಗಿಳಿಯ ಜಾತಿಗೆ ಸೇರಿದ ಕಾಕ್ಟೇಲ್ ಎಂಬ ಪಕ್ಷಿಯ ಗಾಯನ ಸುಧೆ ಕಂಡು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಟಿಕ್ಟಾಕ್ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಸಂಗೀತಕಾರ ನುಡಿಸಿದ ಕೀಬೋರ್ಡ್ ಧ್ವನಿಗೆ ಸರಿಯಾಗಿ ಮಶ್ರೂಮ್ ಎಂಬ ಹೆಸರಿನ ಈ ಪಕ್ಷಿಯು ಹಾಡನ್ನು ಹಾಡಿದೆ.
ಗಿಳಿಯ ಮೂಲ ವಿಡಿಯೋವನ್ನು ಟಿಕ್ಟಾಕ್ನಲ್ಲಿ VeggieBirbLady ಎಂಬ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಜೊತೆಗೆ ಕಾರ್ಟರ್ ಡ್ಯುಯಟ್ ಮಾಡಿದ್ದು ಈ ಪ್ರಯತ್ನವು ನೆಟ್ಟಿಗರ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
https://www.instagram.com/p/CSzm9_mp6-H/?utm_source=ig_web_copy_link