alex Certify ಮೇಲಕ್ಕೆ ಹಾರುವ ಜಲಪಾತ: ಪ್ರಕೃತಿಯ ಅದ್ಭುತ ಕಂಡು ನೆಟ್ಟಿಗರು ಬೆರಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಲಕ್ಕೆ ಹಾರುವ ಜಲಪಾತ: ಪ್ರಕೃತಿಯ ಅದ್ಭುತ ಕಂಡು ನೆಟ್ಟಿಗರು ಬೆರಗು

ಪ್ರಕೃತಿ ತನ್ನೊಳಗೆ ಹಲವಾರು ಕುತೂಹಲಗಳನ್ನು ಅಡಗಿಸಿಕೊಂಡಿದೆ. ಮನುಷ್ಯನ ತಿಳಿವಳಿಕೆಗೆ ನಿಲುಕದ್ದು ಅದೆಷ್ಟೋ ನಿಗೂಢಗಳು ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ತುರ್ಕಮೆನಿಸ್ತಾನದಲ್ಲಿ ನರಕದ ಗೇಟ್ಸ್ ಅಥವಾ ಚೀನಾದ ಶಿಲಿನ್ ಕಲ್ಲಿನ ಅರಣ್ಯ ಎಂದು ಕರೆಯಲ್ಪಡುವ ಸುಡುವ ರಂಧ್ರಗಳು.

ಈಗ ಅಂಥದ್ದೇ ಇನ್ನೊಂದು ವಿಸ್ಮಯದ ವಿಡಿಯೋ ವೈರಲ್​ ಆಗುತ್ತಿದೆ. ಜಲಪಾತ ಎಂದಾಕ್ಷಣ ಮೇಲಿನಿಂದ ನೀರು ಕೆಳಕ್ಕೆ ಬೀಳುವ ದೃಶ್ಯ ಕಣ್ಣಮುಂದೆ ಬರುತ್ತದೆ. ಆದರೆ ಈ ಜಲಪಾತ ಹಾಗಲ್ಲ. ನೀರು ಕೆಳಕ್ಕೆ ಅಲ್ಲ, ಬದಲಿಗೆ ಗಾಳಿಯಲ್ಲಿ ಮೇಲಕ್ಕೆ ಹಾರಿ ಹೋಗುತ್ತದೆ.

ಇಂಥದ್ದೊಂದು ಕುತೂಹಲದ ಜಲಪಾತವೀಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ನಾನೇಘಾಟ್ ಜಲಪಾತವು ಮಹಾರಾಷ್ಟ್ರದ ಜುನ್ನಾರ್‌ನಲ್ಲಿದೆ. ಮೋಡಿಮಾಡುವ ಇದರ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಬಳಕೆದಾರರನ್ನು ಬೆರಗುಗೊಳಿಸಿದೆ. ಇದರಲ್ಲಿ ನೀರು ಕೆಳಗಿನಿಂದ ಮೇಲಕ್ಕೆ ಹಾರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...