alex Certify ಬೈಕರ್‌ ಗೆ ಏಕಾಏಕಿ ಎದುರಾದ್ವು 3 ಕರಡಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕರ್‌ ಗೆ ಏಕಾಏಕಿ ಎದುರಾದ್ವು 3 ಕರಡಿ: ವಿಡಿಯೋ ವೈರಲ್

ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಒಂದಿಲ್ಲೊಂದು ವಿಡಿಯೋಗಳನ್ನ ಶೇರ್​ ಮಾಡುವ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಲೇ ಇರ್ತಾರೆ.

ಇದೀಗ ತಮಿಳುನಾಡಿನಲ್ಲಿ ಸೆರೆ ಹಿಡಿದಿದ್ದು ಎನ್ನಲಾದ ವಿಡಿಯೋವನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಬೈಕ್​ ಸವಾರನೊಬ್ಬ ಹಸಿರಿನಿಂದ ಸುತ್ತುವರಿದ ರಸ್ತೆಯಲ್ಲಿ ಬೈಕ್​ ಸವಾರಿ ಮಾಡುತ್ತಾ ಇರುತ್ತಾನೆ. ಇದೇ ವೇಳೆ ಸರಿಯಾಗಿ ಅನತಿ ದೂರದಲ್ಲಿ ಆತನಿಗೆ ಕರಡಿಗಳು ಕಾಣ ಸಿಗುತ್ತದೆ. ಆತ ಸ್ವಲ್ಪ ಮುಂದೆ ಹೋಗಿ ನೋಡಿದಾಗ ಮೂರು ಕರಡಿಗಳು ರಸ್ತೆಯನ್ನ ಆರಾಮಗಿ ಕುಳಿತುಕೊಂಡಿದ್ದನ್ನ ತೋರಿಸುತ್ತಿದ್ದಾನೆ.

ಆ ಕರಡಿಗಳು ಬೈಕರ್​ನ್ನೇ ಗುರಾಯಿಸುತ್ತಾ ಇರುತ್ವೆ. ಕರಡಿಗಳು ಬೈಕ್​ ಸವಾರನ ಹತ್ತಿರ ಬರುತ್ತಿದ್ದಾಗ ವಿಡಿಯೋ ಕೊನೆಯಾಗಿದೆ.

ಈ ವಿಡಿಯೋ ಇಲ್ಲಿಯವರೆಗೆ 1.2 ಲಕ್ಷಕ್ಕಿಂತಲೂ ಅಧಿಕ ವೀವ್ಸ್ ಸಂಪಾದಿಸಿದೆ. ಅನೇಕರು ಕರಡಿಗಳು ಸೋಮಾರಿಗಳು ಎಂದು ಹೇಳಿದ್ದರೆ ಇನ್ನು ಹಲವರು ಬೈಕ್ ಸವಾರ ಸುರಕ್ಷಿತವಾಗಿದ್ದಾನೆ ಅಲ್ಲವೇ ಎಂದು ವಿಚಾರಿಸಿದ್ದಾರೆ.

— anand mahindra (@anandmahindra) June 24, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...