
ಇದೀಗ ತಮಿಳುನಾಡಿನಲ್ಲಿ ಸೆರೆ ಹಿಡಿದಿದ್ದು ಎನ್ನಲಾದ ವಿಡಿಯೋವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ಹಸಿರಿನಿಂದ ಸುತ್ತುವರಿದ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತಾ ಇರುತ್ತಾನೆ. ಇದೇ ವೇಳೆ ಸರಿಯಾಗಿ ಅನತಿ ದೂರದಲ್ಲಿ ಆತನಿಗೆ ಕರಡಿಗಳು ಕಾಣ ಸಿಗುತ್ತದೆ. ಆತ ಸ್ವಲ್ಪ ಮುಂದೆ ಹೋಗಿ ನೋಡಿದಾಗ ಮೂರು ಕರಡಿಗಳು ರಸ್ತೆಯನ್ನ ಆರಾಮಗಿ ಕುಳಿತುಕೊಂಡಿದ್ದನ್ನ ತೋರಿಸುತ್ತಿದ್ದಾನೆ.
ಆ ಕರಡಿಗಳು ಬೈಕರ್ನ್ನೇ ಗುರಾಯಿಸುತ್ತಾ ಇರುತ್ವೆ. ಕರಡಿಗಳು ಬೈಕ್ ಸವಾರನ ಹತ್ತಿರ ಬರುತ್ತಿದ್ದಾಗ ವಿಡಿಯೋ ಕೊನೆಯಾಗಿದೆ.
ಈ ವಿಡಿಯೋ ಇಲ್ಲಿಯವರೆಗೆ 1.2 ಲಕ್ಷಕ್ಕಿಂತಲೂ ಅಧಿಕ ವೀವ್ಸ್ ಸಂಪಾದಿಸಿದೆ. ಅನೇಕರು ಕರಡಿಗಳು ಸೋಮಾರಿಗಳು ಎಂದು ಹೇಳಿದ್ದರೆ ಇನ್ನು ಹಲವರು ಬೈಕ್ ಸವಾರ ಸುರಕ್ಷಿತವಾಗಿದ್ದಾನೆ ಅಲ್ಲವೇ ಎಂದು ವಿಚಾರಿಸಿದ್ದಾರೆ.