alex Certify ಮುದ್ದುಮುದ್ದಾಗಿದೆ ಮೊದಲ ಬಾರಿ Pizza ತಿಂದ ಪುಟಾಣಿ ರಿಯಾಕ್ಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದುಮುದ್ದಾಗಿದೆ ಮೊದಲ ಬಾರಿ Pizza ತಿಂದ ಪುಟಾಣಿ ರಿಯಾಕ್ಷನ್

ನೀವು ಮೊದಲ ಬಾರಿ‌ ಪಿಜ್ಜಾ ತಿಂದಿದ್ದು ಯಾವಾಗ..? ನಿಮ್ಮ ರಿಯಾಕ್ಷನ್ ಹೇಗಿತ್ತು..? ಇದಕ್ಕೆ ಉತ್ತರ ಬಹುಶಃ ನಿಮ್ಮ ಬಳಿ ಇರಲಿಕ್ಕಿಲ್ಲ. ಆದರೆ ಇಲ್ಲೊಬ್ಬ ಪುಟಾಣಿ ಮೊದಲ ಬಾರಿ ಪಿಜ್ಜಾ ತಿಂದಿರೊ ವಿಡಿಯೊ‌ ಸಖತ್ ವೈರಲ್ ಆಗ್ತಿದೆ.

ಟೇಬಲ್ ಮುಂದೆ ಕುಳಿತು ತನಗೆ ನೀಡಿದ ಆಹಾರ ತಿನ್ನುತ್ತಿದ್ದ ಪುಟಾಣಿಗೆ ಅವರಮ್ಮ ಪಿಜ್ಜಾ ತಿನ್ನಿಸಿದ್ದಾರೆ, ಚೀಸ್ ಭರಿತ ಪಿಜ್ಜಾ ತಿಂದಮೇಲೆ ಆ ಕಂದಮ್ಮ ನೀಡಿರೊ ರಿಯಾಕ್ಷನ್, ಪಿಜ್ಜಾ ತಿನ್ನುವ ಪರಿ ಸಖತ್ ಕ್ಯೂಟ್ ಆಗಿದೆ. ಮುಂದೆ ಈ ಪುಟಾಣಿಯನ್ನ ಯಾರಾದರು, ಮೊದಲ ಬಾರಿ‌ ಪಿಜ್ಜಾ ತಿಂದಾಗ ನಿನ್ನ ರಿಯಾಕ್ಷನ್ ಹೇಗಿತ್ತು‌ ಎಂದರೆ ಈ ವಿಡಿಯೋ ತೋರಿಸಬಹುದು.

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡ ಪಾಪಿಗಳು

ಪುಟಾಣಿಯ ರಿಯಾಕ್ಷನ್ ವಿಡಿಯೋವನ್ನ ಮೂಲತಃ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಅದರ ನಂತರ ಟಿಕ್‌ಟಾಕ್ ಯೂಸರ್ ಒಬ್ಬರು ಈ ವಿಡಿಯೋವನ್ನ ಫೇಸ್ಬುಕ್ ನಲ್ಲಿ‌ ಅಪ್ಲೋಡ್ ಮಾಡಿದ್ದಾರೆ. ಸಧ್ಯ ಟಿಕ್ ಟಾಕ್ ನಲ್ಲು ಸಖತ್ ವೈರಲ್ ಆಗಿರುವ ಈ ವಿಡಿಯೋ ಎಲ್ಲರ ಮನಸ್ಸು ಗೆಲ್ತಿದೆ‌. ಈ ಪುಟಾಣಿಯ ಕ್ಯೂಟ್ ರಿಯಾಕ್ಷನ್ ಗೆ ಮಿಲಿಯನ್ ಗಟ್ಟಲೆ ಲೈಕ್ಸ್ ದೊರೆತಿದೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...