
ದಕ್ಷಿಣ ಆಫ್ರಿಕಾದ ಸೆಲಾಟಿ ಗೇಮ್ ರಿಸರ್ವ್‌ನಲ್ಲಿ ಆನೆಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡಿರುವ ಭಯಾನಕ ವಿಡಿಯೋ ವೈರಲ್ ಆಗಿದೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ತರಬೇತಿ ಮಾರ್ಗದರ್ಶಕರನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಗಿಡಗಂಟಿಗಳಿಂದ ಹೊರಬಂದ ಆನೆಯೊಂದು ನೇರವಾಗಿ ಸಫಾರಿ ವಾಹನದತ್ತ ಓಡುತ್ತಾ ಬಂದು ದಾಳಿ ಮಾಡಿದೆ.
ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಕೆನರಾ ಬ್ಯಾಂಕಿನಿಂದ ‘ಬಂಪರ್’ ಆಫರ್
ಆಕ್ರಮಣಕಾರಿ ಆನೆಯಿಂದ ದಾಳಿಗೊಳಗಾದ ಜೀಪ್ ನ ಟ್ರೈನಿ ಗೈಡ್‌ಗಳು ಹೆದರಿ ಓಡಿದ್ದಾರೆ. ಬಳಿಕ ಆನೆ ಕೂಡ ಏನು ಮಾಡದೆ ಹಿಂದಿರುಗಿದೆ. ಮೈ ಜುಮ್ಮೆನ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ.
ಸಂತಾನೋತ್ಪತ್ತಿ ಹಿಂಡಿನ ಜೊತೆಯಲ್ಲಿದ್ದ ಆನೆ ಬುಲ್ ಏಕಾಏಕಿ ದಾಳಿ ಮಾಡಿದೆ. ಸಂಯೋಗದ ಅವಧಿಯಲ್ಲಿ ಗಂಡು ಆನೆಗಳು ಈ ರೀತಿ ಆಕ್ರಮಣಶೀಲತೆಯನ್ನು ವರ್ತಿಸುವುದು ಸಾಮಾನ್ಯ ಎಂದು ತರಬೇತಿ ಪಡೆದ ಮಾರ್ಗದರ್ಶಕರು ತಿಳಿಸಿದ್ದಾರೆ.