ಕೆಲವರು ರಾತ್ರೋರಾತ್ರಿ ಹೀರೊಗಳಾಗಲು ಹುಚ್ಚು ಸಾಹಸ ಮಾಡುವುದು ಇದೆ. ಕೆಲವೊಮ್ಮೆ ಈ ಸಾಹಸಗಳು ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇದ್ದರೆ, ಕೆಲವೊಮ್ಮೆ ಅಚ್ಚರಿ ಎನ್ನುವಂಥ ರೀತಿಯಲ್ಲಿ ಸಾಹಸ ಕಾರ್ಯಗಳನ್ನು ಮಾಡುವುದು ಉಂಟು.
ಅಂಥದ್ದೇ ವಿಡಿಯೋ ಒಂದು ಈಗ ವೈರಲ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರೈಫಲ್ ಮತ್ತು ಕೈಯಿಂದ ಬಂದೂಕಿನಿಂದ ತನ್ನ ಬಾಯಿಗೆ ಗುಂಡು ಹಾರಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಕೆಲವು ಸೆಕೆಂಡುಗಳ ನಂತರ, ಮಿಲಿಟರಿ ಉಡುಪಿನಲ್ಲಿರುವ ವ್ಯಕ್ತಿ ಗುಂಡುಗಳ ಚಿಪ್ಪುಗಳನ್ನು ಉಗುಳುವುದನ್ನು ನೋಡಬಹುದು.
ಮೊದಲಿಗೆ ದೊಡ್ಡ ಗನ್ನಿಂದ ಬಾಯಿಗೆ ಹೊಡೆದುಕೊಂಡು ನಂತರ ಬುಲೆಟ್ ಉಗುಳಿದ್ದಾನೆ, ನಂತರ ಸಣ್ಣ ಪಿಸ್ತೂಲ್ ಅನ್ನು ತಮ್ಮ ಬಾಯಿಗೆ ಗುರಿಯಾಗಿಟ್ಟುಕೊಂಡು ಟಪ್ ಎಂದು ಬೆಂಕಿ ಹಾಕಿಸಿಕೊಂಡು ನಂತರ ಬುಲೆಟ್ ಅನ್ನು ಎಸೆದಿದ್ದಾನೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತಲ್ಲಣ ಸೃಷ್ಟಿಸಿದೆ. ಹಲವರು ಇದನ್ನು ನಕಲಿ ಗನ್ ಎಂದು ಹೇಳಿದ್ದಾರೆ. ವೀಡಿಯೊವನ್ನು ನೀವೊಮ್ಮೆ ವೀಕ್ಷಿಸಿ ನಿಜವೋ ಅಲ್ಲವೋ ಎಂದು ಬೇಕಿದ್ದರೆ ಹೇಳಿ.
https://twitter.com/HumansNoContext/status/1642522379157897217?ref_src=twsrc%5Etfw%7Ctwcamp%5Etweetembed%7Ctwterm%5E164252