ದೊಡ್ಡ ದೊಡ್ಡ ಕೃಷಿ ಭೂಮಿಗಳಲ್ಲಿ ಆಹಾರ ಧಾನ್ಯಗಳನ್ನ ಸಂಗ್ರಹಿಸಲು ಸಿಲೋಗಳನ್ನ ಬಳಸಲಾಗುತ್ತದೆ. ಈ ಸಿಲೋಗಳು 50 ವರ್ಷಗಳ ಕಾಲ ಬಾಳಿಕೆ ಬರಬಲ್ಲವು.
ಹಾಗೂ ಇವುಗಳನ್ನ ನೆಲಸಮ ಮಾಡಿದ ಸಾಕಷ್ಟು ವಿಡಿಯೋಗಳು ಸಹ ಇಂಟರ್ನೆಟ್ನಲ್ಲಿ ಹರಿದಾಡುತ್ತಾ ಇರುತ್ತೆ. ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಮೆರಿಕದಲ್ಲಿರುವ ಫಾರ್ಮ್ ಲ್ಯಾಂಡ್ನಲ್ಲಿ ನಿರ್ಮಾಣ ಮಾಡಲಾದ ಸಿಲೋ ಒಂದು ಸರಿಯಾದ ಆಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಅದನ್ನ ನೆಲಸಮ ಮಾಡಲಾಗಿದೆ. ಮೊದಲು ಇದು ಅಲುಗಾಡಲು ಆರಂಭಿಸುತ್ತೆ. ಹಾಗೂ ಕ್ರಮೇಣವಾಗಿ ಹಂತ ಹಂತವಾಗಿ ನೆಲಸಮವಾಗುತ್ತೆ. ಸಿಲೋ ಸಂಪೂರ್ಣ ಧ್ವಂಸಗೊಂಡ ಬಳಿಕ ಜನರು ನಗೆಯಾಡೋದನ್ನ ನೀವು ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದೆ.