alex Certify Watch Video | ಏಳೇ ಸೆಕೆಂಡ್‌ಗಳಲ್ಲಿ ಧರೆಗುರುಳಿದ ಬೃಹತ್‌ ಸ್ಥಾವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಏಳೇ ಸೆಕೆಂಡ್‌ಗಳಲ್ಲಿ ಧರೆಗುರುಳಿದ ಬೃಹತ್‌ ಸ್ಥಾವರ

ಗುಜರಾತ್‌ನ ಸೂರತ್‌ ನಗರದ ಉತ್ರಾನ್ ವಿದ್ಯುತ್‌ ಘಟಕದಲ್ಲಿದ್ದ 30 ವರ್ಷ ಹಳೆಯ ಕೂಲಿಂಗ್ ಸ್ಥಾವರವನ್ನು ನಿಯಂತ್ರಿತ ಸ್ಫೋಟದ ಮೂಲಕ ಧ್ವಂಸಗೊಳಿಸಲಾಗಿದೆ.

85 ಮೀಟರ್‌ ಎತ್ತರವಿದ್ದ ಈ ಸ್ಥಾವರದ ವ್ಯಾಸವು 72 ಮೀಟರ್‌ಗಳಷ್ಟಿತ್ತು. ಬೆಳಿಗ್ಗೆ 11:10ರ ವೇಳೆಗೆ ಈ ಸ್ಥಾವರವನ್ನು ಧರೆಗುರುಳಿಸಲಾಗಿದೆ. ಈ ಕ್ರಿಯೆಗೆ 220 ಕೆಜಿಯಷ್ಟು ವಾಣಿಜ್ಯೋದ್ದೇಶದ ಸ್ಫೋಟಕಗಳನ್ನು ಬಳಸಲಾಗಿದೆ.

ಕೇವಲ ಏಳೇ ಸೆಕೆಂಡ್ ಗಳಲ್ಲಿ ಈ ಸ್ಥಾವರ ನೆಲಕಚ್ಚುತ್ತಿರುವ ವಿಡಿಯೋವನ್ನು ಎಎನ್‌ಐ ಸುದ್ದಿ ಸಂಸ್ಥೆ ಬಿತ್ತರಿಸಿದೆ. ಸೆಕೆಂಡ್‌ಗಳಲ್ಲಿ ಬೂದಿಯಾದ ಸ್ಥಾವರ ನೆಲಕ್ಕಪ್ಪಳಿಸುತ್ತಲೇ ಆ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಧೂಳು ಆವರಿಸಿತ್ತು.

ತಾಪಿ ನದಿಯ ದಂಡೆಯಲ್ಲಿ ತಲೆಯೆತ್ತಿರುವ ವಿದ್ಯುತ್‌ ಘಟಕದ ಸುತ್ತಲಿನ 350 ಮೀಟರ್‌ ಪ್ರದೇಶದಲ್ಲಿ ಜನಸಂಚಾರಕ್ಕೆ ನಿಷೇಧ ಹೇರಲಾಗಿತ್ತು. 1993ರಲ್ಲಿ ನಿರ್ಮಾಣವಾದ ಈ ಸ್ಥಾವರವು ಗುಜರಾತ್‌ ರಾಜ್ಯ ವಿದ್ಯುತ್‌ ನಿಗಮಕ್ಕೆ ಸೇರಿದ್ದಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...