200 ಸ್ಕೈಡೈವರ್ಗಳು ಚಿಟ್ಟೆಗಳ ಹಿಂಡುಗಳಂತೆ ಗಾಳಿಯಲ್ಲಿ ತೇಲುವ ಅದ್ಭುತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೆೈರಲ್ ಆಗುತ್ತಿದೆ.
ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ಉದ್ದೇಶದಿಂದ ವರ್ಣರಂಜಿತ ಉಡುಗೆ ತೊಟ್ಟ ಗುಂಪು ಸ್ಕೈ ಡೈವ್ ಮಾಡಿದೆ. ಸ್ಕೈಡೈವರ್ ಕರೀನ್ ಜೋಲಿ ಅವರು ವಿಡಿಯೊವನ್ನು ಇನ್ಸ್ಟಾದಲ್ಲಿ ಆ.26ರಂದು ಹಂಚಿಕೊಂಡಿದ್ದಾರೆ.
ಇದು ಸುಲಭದ ಸಾಧನೆಯಲ್ಲ. “ಆ ಡೈವಿಂಗ್ ತಾಂತ್ರಿಕವಾಗಿವೆ, ತಲೆ ಕೆಳಗೆ ಹಾರಲು ತಿಳಿದಿರಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಶಾಂತವಾಗಿರಬೇಕಾಗುತ್ತದೆ. ಮೆಂಟಲ್ ಗೇಮ್ ಅದನ್ನು ಯಶಸ್ವಿಯಾಗಿಸುತ್ತದೆ” ಎಂದು ಅವರು ವಿವರಿಸಿದ್ದಾರೆ.
ಈ ವಿಡಿಯೋ ವೀಕ್ಷಕರನ್ನು ಅಚ್ಚರಿಗೆ ದೂಡುತ್ತದೆ. ಸಾವಿರಾರು ಅಡಿಗಳ ಎತ್ತರದಲ್ಲಿ ನಿಲ್ಲಲು ಆಗದ ಸ್ಥಿತಿಯಲ್ಲಿ ತೇಲುತ್ತಲೇ ರಚನೆಗಳನ್ನು ಮಾಡುವುದು, ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಕೆಲವು ಕ್ಷಣಗಳಲ್ಲಿ ಗುರಿ ಮುಟ್ಟುವ ಪ್ರಯತ್ನ ಅಚ್ಚರಿ ಮೂಡಿಸುತ್ತದೆ.
ಇತ್ತೀಚೆಗೆ, ಥಾಯ್ಲೆಂಡ್ನಲ್ಲಿ ವಿಮಾನದಿಂದ 13,000 ಅಡಿಗಳಷ್ಟು ಎತ್ತರದಿಂದ ಬೀಳುವ ಸಂದರ್ಭದಲ್ಲಿ ಸ್ಕೈಡೈವರ್ ರೂಬಿಕ್ಸ್ ಕ್ಯೂಬ್ ಪಿರಮಿಡ್ ಪಝಲ್ ಅನ್ನು ರಚಿಸಿದ್ದರು.