
ಮುಂಬೈನ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ಮಾಡುವ ವೇಳೆ ಮೊದಲ ಓವರ್ ನಲ್ಲಿ ಈ ಘಟನೆ ಸಂಭವಿಸಿದೆ.
ಈ ಬೆಕ್ಕು ಕ್ರೀಡಾಂಗಣದೊಳಕ್ಕೂ ಬಂದಿರಲಿಲ್ಲ. ಆದರೆ ಇದು ಸೈಟ್ ಸ್ಕ್ರೀನ್ ಮುಂದೆ ಕುಳಿತಿದ್ದ ಕಾರಣ ಬ್ಯಾಟ್ಸ್ ಮನ್ ಗಳಿಗೆ ಬಾಲ್ ಗುರುತಿಸಲು ಅಡಚಣೆಯಾಗಿದೆ. ಬಳಿಕ ಅಂಪೈರ್ ಸಿಬ್ಬಂದಿಗೆ ಹೇಳಿ ಬೆಕ್ಕನ್ನು ಅಲ್ಲಿಂದ ಕಳುಹಿಸಿದ ಬಳಿಕ ಆಟ ಆರಂಭವಾಗಿದೆ.