ಬಟ್ಟೆ ಒಗೆಯುವುದೆಂದರೆ ಕೆಲವರಿಗೆ ಬಹಳ ಕಷ್ಟದ ಕೆಲಸ. ಅದಕ್ಕಾಗಿ ಬಹುತೇಕರು ವಾಷಿಂಗ್ ಮೆಷಿನ್ ಮೊರೆ ಹೋಗುತ್ತಾರೆ. ಇದು ಪರಿಸರದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ನಮ್ಮ ಪರಿಸರವನ್ನು ಉಳಿಸಲು ನಾವು ಇಂತಹ ಯಂತ್ರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕಿದೆ ಅನ್ನೋದು ತಜ್ಞರ ಅಭಿಮತ.
ಸೊಸೈಟಿ ಆಫ್ ಕೆಮಿಕಲ್ ಇಂಡಸ್ಟ್ರಿಯ ಇತ್ತೀಚಿನ ವರದಿಯಲ್ಲಿ, ಜನರಿಗೆ ತಮ್ಮ ಬಟ್ಟೆಗಳನ್ನು ಎಷ್ಟು ಬಾರಿ ತೊಳೆಯಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಜೀನ್ಸ್ ಉಡುಪನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಬೇಕು. ಪೈಜಾಮಾವನ್ನು ವಾರಕ್ಕೊಮ್ಮೆ ಮಾತ್ರ ಸ್ವಚ್ಛಗೊಳಿಸಬೇಕು ಎಂದು ವರದಿ ಹೇಳುತ್ತದೆ.
ಒಳ ಉಡುಪು, ಜಿಮ್ ಬಟ್ಟೆ ಹಾಗೂ ಕೊಳಕಾಗುವ ಬಟ್ಟೆಗಳನ್ನು ಉಟ್ಟ ನಂತರ ಪ್ರತಿ ಬಾರಿ ತೊಳೆಯಬೇಕು. ವಾಷಿಂಗ್ ಮೆಷಿನ್ ಬಳಸುವ ಬದಲು ಪ್ರತಿ ದಿನವೂ ಕೇವಲ ಕೈಗಳಿಂದ ಒಳ ಉಡುಪುಗಳನ್ನು ತೊಳೆಯಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಬಟ್ಟೆ ಉತ್ಪಾದಿಸುವ ಕಂಪನಿ ತೆರೆದ 17ರ ಬಾಲಕ..!
ಟಾಪ್ಸ್ ಮತ್ತು ಟೀ ಶರ್ಟ್‌ಗಳಂತಹ ಬಟ್ಟೆಗಳನ್ನು ಐದು ಉಡುಗೆಗಳ ನಂತರ ಸ್ವಚ್ಛಗೊಳಿಸಬೇಕು. ಬಟ್ಟೆಗಳನ್ನು ಕಡಿಮೆ ತೊಳೆಯುವುದರಿಂದ ಬಟ್ಟೆಗಳು ಹೆಚ್ಚು ಕಾಲ ಉಳಿಯುತ್ತವೆ. ನಾಲ್ಕರಿಂದ ಆರು ಉಡುಗೆಗಳ ನಂತರ ಉಡುಪುಗಳನ್ನು ಲಾಂಡ್ರಿಗೆ ಹಾಕಬೇಕು. ಅಷ್ಟೇ ಅಲ್ಲ, ಇದು ನಿಮ್ಮ ಸಮಯ ಮತ್ತು ಹಣವನ್ನು ಕೂಡ ಉಳಿಸುತ್ತದೆ.
ಇನ್ನು ಜೀನ್ಸ್ ಅನ್ನು ಫ್ರೀಜ್ ಮಾಡುವುದು ಮತ್ತು ನಿಟ್ವೇರ್ ಅನ್ನು ಆವಿಯಲ್ಲಿ ಸೇರಿಸಿ ಒಗೆದರೆ ಹೆಚ್ಚು ನೀರನ್ನು ಬಳಸಬೇಕಾಗಿಲ್ಲ. ಇದರಿಂದ ನೀರಿನ ಉಳಿತಾಯ ಮಾಡಬಹುದು ಎಂದು ತಜ್ಞರು ಸೂಚಿಸಿದ್ದಾರೆ.