ಪದೇ ಪದೇ ಮುಖ ತೊಳೆದುಕೊಳ್ಳುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತೇ?
ಕೆಲವರಿಗೆ ವಾಶ್ ರೂಮ್ ಗೆ ಹೋಗಿ ಬಂದಷ್ಟು ಸಲ ಮುಖ ತೊಳೆದುಕೊಳ್ಳುವ ಅಭ್ಯಾಸ ಇರುತ್ತದೆ. ಆದರೆ ಹೀಗೆ ತೊಳೆಯುವಾಗ ಪ್ರತಿ ಬಾರಿ ಸೋಪ್ ಬಳಸಿದರೆ ನಿಮ್ಮ ತ್ವಚೆಗೆ ಹಾನಿಯಾಗಬಹುದು ಎಂಬುದನ್ನು ನೆನಪಿಡಿ. ಸೋಪ್ ನಿಮ್ಮ ಮುಖದ ತೇವಾಂಶವನ್ನು ತೆಗೆದು ಹಾಕಬಹುದು.
ಸ್ಕ್ರಬ್ ಬಳಸದಿರಿ. ನಿಧಾನವಾಗಿ ಕೈಯಿಂದಲೇ ವೃತ್ತಾಕಾರದಲ್ಲಿ ಉಜ್ಜಿ. ಫೇಸ್ ವಾಶ್ ಅನ್ನು ದಿನದಲ್ಲಿ ಒಂದೆರಡು ಬಾರಿ ಬಳಸಿದರೆ ಸಾಕು, ಕೆಲವು ಫೇಸ್ ವಾಶ್ ಗಳು ಕೆಲವರಿಗೆ ಹೊಂದಾಣಿಕೆ ಆಗುವುದಿಲ್ಲ. ಈ ಬಗ್ಗೆ ಎಚ್ಚರ ವಹಿಸಿ.
ಮಾಯಿಸ್ಚರೈಸರ್ ಬಗ್ಗೆಯೂ ಗಮನವಿರಲಿ. ಸೆನ್ಸಿಟಿವ್ ಮುಖಕ್ಕೆ ಮಾಯಿಸ್ಚರೈಸರ್ ಬಳಸುವುದರಿಂದ ಬಹುಬೇಗ ಸಮಸ್ಯೆಗಳು ಕಂಡು ಬಂದಾವು. ಮುಖ ತೊಳೆಯುವಾಗೆಲ್ಲ ತಣ್ಣಗಿನ ನೀರು ಬಳಸುವುದು ಅತ್ಯುತ್ತಮ. ಅನಿವಾರ್ಯವಾದರೆ ಉಗುರು ಬೆಚ್ಚಗಿನ ನೀರು ಬಳಸಿ. ಬಿಸಿ ನೀರನ್ನು ಬಳಸಿದಿರಿ.