ಕೋವಿಡ್ ಪೀಡಿತ ಮಾವನನ್ನು ತನ್ನ ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ನಿಹಾರಿಕಾ ದಾಸ್ ಎಂಬ ಮಹಿಳೆಯ ಚಿತ್ರಗಳು ಕಳೆದ ವಾರ ವೈರಲ್ ಆಗಿದ್ದವು.
ಸಂಕಷ್ಟದಲ್ಲಿದ್ದ ತನ್ನ ನೆರವಿಗೆ ಬರಲು ಯಾರೂ ಮುಂದೆ ಬರದೇ ಇದ್ದ ಸಂಗತಿಯನ್ನು ನೋವಿನಿಂದ ಹೇಳಿಕೊಂಡಿದ್ದ ನಿಹಾರಿಕಾ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಮಳೆಗಾಲದಲ್ಲಿ ಸೂಕ್ಷ್ಮಜೀವಿಗಳಿಂದ ದೇಹವನ್ನು ಕಾಪಾಡುವುದು ಹೇಗೆ….?
ಅಸ್ಸಾಂ ನಾಗಾಂವ್‌ನ ರಾಹಾದ ನಿಹಾರಿಕಾ, “75 ವರ್ಷ ವಯಸ್ಸಿನ ನನ್ನ ಮಾವ ತಾಲೇಶ್ವರ್ ದಾಸ್ ಜೂನ್ 2ರಂದು ಕೋವಿಡ್ ರೋಗಲಕ್ಷಣಗಳನ್ನು ತೋರಿಕೊಂಡಿದ್ದರು. ಎದ್ದು ನಿಲ್ಲಲೂ ಪರದಾಡುತ್ತಿದ್ದ ನನ್ನ ಮಾವನನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೋರಿಕ್ಷಾ ವ್ಯವಸ್ಥೆ ಮಾಡಿದೆ. ಆದರೆ ನನ್ನ ಮನೆಯ ಬಾಗಿಲಿನವರೆಗೂ ರಿಕ್ಷಾ ಬರಲು ಅಸಾಧ್ಯವಾಗಿದ್ದ ಕಾರಣ, ಮನೆಬಾಗಿಲಿನಿಂದ ಆಟೋರಿಕ್ಷಾವರೆಗೂ ನಾನೇ ಅವರನ್ನು ಹೊತ್ತೊಯ್ದೆ” ಎಂದಿದ್ದಾರೆ.
ಘಟನೆ ನಡೆದ ವೇಳೆ ನಿಹಾರಿಕಾ ಪತಿ ದೂರದ ಸಿಲಿಗುರಿಯಲ್ಲಿ ಕೆಲಸದಲ್ಲಿದ್ದರು. ಆಟೋ ರಿಕ್ಷಾ ಪ್ರಹಸನದ ಬಳಿಕದ ಕಥೆ ಮುಂದುವರೆಸಿದ ನಿಹಾರಿಕಾ, “21ಕಿಮೀ ದೂರ ಇರುವ ನಾಗಾಂವ್‌ನಲ್ಲಿರುವ ಕೋವಿಡ್ ಆಸ್ಪತ್ರೆಗೆ ಮಾವನವರನ್ನು ಕರೆದೊಯ್ಯಬೇಕಾದ ಕಾರಣ ಖಾಸಗಿ ವಾಹನವೊಂದನ್ನು ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಆಗ ಆಂಬುಲೆನ್ಸ್ ಅಥವಾ ಸ್ಟ್ರೆಚರ್ ಇರಲಿಲ್ಲ. ಹಾಗಾಗಿ, ಖುದ್ದು ನಾನೇ ಅವರನ್ನು ಕಾರಿನೊಳಗೆ ಹೊತ್ತೊಯ್ಯಬೇಕಾಗಿ ಬಂದಿತ್ತು. ನಮ್ಮತ್ತ ನೋಡುತ್ತಿದ್ದ ಜನರಲ್ಲಿ ಯಾರೊಬ್ಬರೂ ನಮಗೆ ಸಹಾಯ ಮಾಡಲು ಮುಂದೆ ಬರಲಿಲ್ಲ” ಎಂದು ನಿಹಾರಿಕಾ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
ಮನಸ್ಸಿಗೆ ಮುದ ನೀಡುತ್ತೆ ಬೆಕ್ಕಿನ ಈ ಮುದ್ದಾದ ವಿಡಿಯೋ
“ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ನಮ್ಮ ನೆರವಿಗೆ ಬರಲಿಲ್ಲ. ನಾನು ಅಂದು ಅವರನ್ನು ಹೊತ್ತುಕೊಂಡು 2 ಕಿಮೀ ನಡೆದಿದ್ದೇನೆ ಎನಿಸುತ್ತದೆ” ಎಂದು ನಿಹಾರಿಕಾ ತಾವು ಎದುರಿಸಿದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ತಾಲೇಶ್ವರರ ಪರಿಸ್ಥಿತಿ ಗಂಭೀರವಾದ ಕಾರಣ ಅವರನ್ನು ಗೌಹಾತಿ ವೈದ್ಯಕೀಯ ಕಾಲೇಜಿಗೆ ರವಾನೆ ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಬಳಿಕ ನಿಹಾರಿಕಾಗೂ ಕೋವಿಡ್ ಪಾಸಿಟಿವ್ ಆಗಿ, ಅವರೀಗ ಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.