alex Certify RRR ಚಿತ್ರದ ದೃಶ್ಯ ಟಾಮ್​ &​ ಜೆರ್ರಿಯದ್ದು…..! ನಕ್ಕು ನಗಿಸುವ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RRR ಚಿತ್ರದ ದೃಶ್ಯ ಟಾಮ್​ &​ ಜೆರ್ರಿಯದ್ದು…..! ನಕ್ಕು ನಗಿಸುವ ವಿಡಿಯೋ ವೈರಲ್​

ತೆಲುಗು ಚಲನಚಿತ್ರ ‘RRR’ ನ ‘ನಾಟು ನಾಟು’ ಆಸ್ಕರ್​ನ ಅತ್ಯುತ್ತಮ ಮೂಲ ಗೀತೆಯಲ್ಲಿ ಪ್ರಶಸ್ತಿ ಪಡೆದು ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದೆ. ಈ ಹಾಡಿಗೆ ತಮ್ಮದೇ ಆದ ರೀತಿಯಲ್ಲಿ ಸ್ಟೆಪ್​ ಹಾಕಿ ರೀಲ್ಸ್ ಮಾಡುವವರಿಗೇನೂ ಕಮ್ಮಿ ಇಲ್ಲ.

ಆದರೆ ಇಲ್ಲೊಂದು ವಿಭಿನ್ನ ವಿಡಿಯೋ ವೈರಲ್​ ಆಗಿದೆ. ಅದೇನೆಂದರೆ RRR ಚಿತ್ರವು ಬೇರೆಯೊಂದು ಕಡೆಯಿಂದ ಕದಿಯಲಾಗಿದೆ ಎಂಬ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಇದನ್ನು ನೋಡಿದವರು ಬಿದ್ದೂ ಬಿದ್ದೂ ನಗುವುದಂತೂ ಸುಳ್ಳಲ್ಲ.

ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಏನೆಂದರೆ, ಆರ್​ಆರ್​ಆರ್​ ಚಿತ್ರದ ದೃಶ್ಯಗಳನ್ನು ಟಾಮ್​ ಆ್ಯಂಡ್​ ಜೆರ್ರಿಯಿಂದ ಕದ್ದದ್ದು ಎಂದಿರುವ ಬಳಕೆದಾರರು ಕೆಲವೊಂದು ಟಾಮ್​ ಆ್ಯಂಡ್​ ಜೆರ್ರಿಯ ವಿಡಿಯೋ ಶೇರ್​ ಮಾಡಿದ್ದಾರೆ. ಅದರಲ್ಲಿ ಟಾಮ್​ ಆ್ಯಂಡ್​ ಜೆರ್ರಿ ಮಾಡುವ ರೀತಿಯಲ್ಲಿಯೇ ಕೆಲವೊಂದು ಸೀನ್​ಗಳು ಆರ್​ಆರ್​ಆರ್ ​ನಲ್ಲಿ ಮಾಡಿರುವುದನ್ನು ನೋಡಬಹುದು. ಇದನ್ನು ನೋಡಿದರೆ ನಗು ತಡೆಯುವುದಕ್ಕಂತೂ ಖಂಡಿತವಾಗಿಯೂ ಸಾಧ್ಯವಿಲ್ಲ. ಮೂಡ್​ ಕೆಟ್ಟಾಗ ನಿಜಕ್ಕೂ ಈ ವಿಡಿಯೋ ನೋಡಬೇಕು ಎಂದು ಹಲವು ಬಳಕೆದಾರರು ಬರೆದಿದ್ದಾರೆ.

— phunnyRabia (@PhunnyRabia) March 12, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...