
ಆದರೆ ಇಲ್ಲೊಂದು ವಿಭಿನ್ನ ವಿಡಿಯೋ ವೈರಲ್ ಆಗಿದೆ. ಅದೇನೆಂದರೆ RRR ಚಿತ್ರವು ಬೇರೆಯೊಂದು ಕಡೆಯಿಂದ ಕದಿಯಲಾಗಿದೆ ಎಂಬ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿದವರು ಬಿದ್ದೂ ಬಿದ್ದೂ ನಗುವುದಂತೂ ಸುಳ್ಳಲ್ಲ.
ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಏನೆಂದರೆ, ಆರ್ಆರ್ಆರ್ ಚಿತ್ರದ ದೃಶ್ಯಗಳನ್ನು ಟಾಮ್ ಆ್ಯಂಡ್ ಜೆರ್ರಿಯಿಂದ ಕದ್ದದ್ದು ಎಂದಿರುವ ಬಳಕೆದಾರರು ಕೆಲವೊಂದು ಟಾಮ್ ಆ್ಯಂಡ್ ಜೆರ್ರಿಯ ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಟಾಮ್ ಆ್ಯಂಡ್ ಜೆರ್ರಿ ಮಾಡುವ ರೀತಿಯಲ್ಲಿಯೇ ಕೆಲವೊಂದು ಸೀನ್ಗಳು ಆರ್ಆರ್ಆರ್ ನಲ್ಲಿ ಮಾಡಿರುವುದನ್ನು ನೋಡಬಹುದು. ಇದನ್ನು ನೋಡಿದರೆ ನಗು ತಡೆಯುವುದಕ್ಕಂತೂ ಖಂಡಿತವಾಗಿಯೂ ಸಾಧ್ಯವಿಲ್ಲ. ಮೂಡ್ ಕೆಟ್ಟಾಗ ನಿಜಕ್ಕೂ ಈ ವಿಡಿಯೋ ನೋಡಬೇಕು ಎಂದು ಹಲವು ಬಳಕೆದಾರರು ಬರೆದಿದ್ದಾರೆ.