alex Certify WAR BREAKING: 3 ಮಕ್ಕಳು ಸೇರಿ 198 ಜನರು ಬಲಿ; ಉಕ್ರೇನ್ ಆರೋಗ್ಯ ಸಚಿವರ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: 3 ಮಕ್ಕಳು ಸೇರಿ 198 ಜನರು ಬಲಿ; ಉಕ್ರೇನ್ ಆರೋಗ್ಯ ಸಚಿವರ ಮಾಹಿತಿ

At least 198 killed in Russian invasion, says Ukraine health minister | The  Times of Israelಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 198 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಆರೋಗ್ಯ ಸಚಿವ ವಿಕ್ಟೋರ್ ಲ್ಯಾಶ್ಕೋ ತಿಳಿಸಿದ್ದಾರೆ.

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಕ್ಷಿಪಣಿ, ಬಾಂಬ್, ಗುಂಡಿನ ದಾಳಿ ನಡೆಸಿದ್ದು, ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸುತ್ತಿದೆ. ಈ ನಡುವೆ ಉಕ್ರೇನ್ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ರಷ್ಯಾ ದಾಳಿಗೆ ಮೂವರು ಮಕ್ಕಳು ಸೇರಿದಂತೆ 198 ಜನರು ಸಾವನ್ನಪ್ಪಿದ್ದಾರೆ. 33 ಮಕ್ಕಳು ಸೇರಿದಂತೆ 1115 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಇದು ಕೇವಲ ನಾಗರಿಕರಿಗೆ ಮಾತ್ರ ಸಂಬಂಧಪಟ್ಟಿದ್ದಿರಬಹುದು ಉಕ್ರೇನ್ ಸೇನೆಯ ಸಾವು-ನೋವು ಕುರಿತು ಈ ಪಟ್ಟಿಯಲ್ಲಿ ಮಾಹಿತಿ ಇಲ್ಲ ಎನ್ನಲಾಗಿದೆ.

ಈ ನಡುವೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆಕ್ರಮಣಕಾರಿಗಳ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ. ಸ್ವಾತಂತ್ರ್ಯಕ್ಕಾಗಿ, ನಮ್ಮ ಉಳಿವಿಗಾಗಿ ಹೋರಾಡಬೇಕಿದೆ ಈ ನಿಟ್ಟಿನಲ್ಲಿ ಯುರೋಪ್ ರಾಷ್ಟ್ರಗಳು ಉಕ್ರೇನ್ ಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...